Connect with us

Dvgsuddi Kannada | online news portal | Kannada news online

ದಾವಣಗೆರೆ: ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 51 ಸಾಧಕರಿಗೆ ಸನ್ಮಾನ

ಪ್ರಮುಖ ಸುದ್ದಿ

ದಾವಣಗೆರೆ: ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 51 ಸಾಧಕರಿಗೆ ಸನ್ಮಾನ

ದಾವಣಗೆರೆ: ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು 51 ಗಣ್ಯರಿಗೆ  ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಸೇರಿದಂತೆ ವಿವಿಧ ಗಣ್ಯಾತಿಗಣ್ಯರು ಸನ್ಮಾನಿಸಿ, ಗೌರವಿಸಿದರು.

ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ  ಸನ್ಮಾನಿತರ ವಿವರ:ಜಾನಪದ ಕ್ಷೇತ್ರ:  ಈಶ್ವರಪ್ಪ, ನರಸಗೊಂಡನಹಳ್ಳಿ, ಹೊನ್ನಾಳಿ (ಕೀಲುಕುದುರೆ), ಎಸ್.ಕೆ.ಜಯಪ್ಪ, ಹರಿಹರ (ಹಗಲುವೇಷ), ಸಿ.ಹೆಚ್.ಉಮೇಶ್ ನಾಯ್ಕ್, ಚಿನ್ನಸಮುದ್ರ, ದಾವಣಗೆರೆ (ಸಂಗೀತ), ಡಿ.ಜಿ.ನಾಗರಾಜ್, ಮುದಹದಡಿ ದಾವಣಗೆರೆ ತಾ: (ಭಜನೆ), ಎ.ಹೆಚ್.ವೀರಪ್ಪ, ಹಳೆ ಹರ್ಲಾಪುರ, ಗುತ್ತೂರು, ಹರಿಹರ ತಾ: (ತತ್ವಪದ).

ಕ್ರೀಡಾ ಕ್ಷೇತ್ರದಲ್ಲಿ ಪರಶುರಾಮಪ್ಪ.ಎನ್, ದಾವಣಗೆರೆ, ಅಬ್ದುಲ್ ಗಫರ್.ಎ, ದಾವಣಗೆರೆ, ಸುಧಾ.ಎ, ದಾವಣಗೆರೆ. ಸಂಘ-ಸಂಸ್ಥೆ ಕ್ಷೇತ್ರದಲ್ಲಿ ವೀರೇಶ್ವರ ಪುಣ್ಯಾಶ್ರಮ, ಬಾಡಾ ಕ್ರಾಸ್, ದಾವಣಗೆರೆ. ಶಿಕ್ಷಣ ಕ್ಷೇತ್ರ:  ಎ.ಬಿ.ರಾಮಚಂದ್ರಪ್ಪ ದಾವಣಗೆರೆ. ಅನಿತಾ ದೊಡ್ಡಗೌಡರ್, ದಾವಣಗೆರೆ.ರಂಗಭೂಮಿ ಕ್ಷೇತ್ರದಲ್ಲಿ ಜೈಲಕ್ಷ್ಮಿ ಹೆಗಡೆ, ದಾವಣಗೆರೆ. ಸಿ.ವಿ.ನಾಗೇಶ್, ಚದುರಗೊಳ್ಳ, ಜಗಳೂರು. ವೀರಪ್ಪ ಅಂದಲಗಿ, ಹರಿಹರ.

ಕೃಷಿ ಕ್ಷೇತ್ರ:  ಡಾ.ಎನ್.ಎಸ್.ವೆಂಕಟರಾಮಾಂಜನೇಯ, ಹಳೇಕುಂದವಾಡ, ಹರಿಹರ ತಾ:, ದ್ಯಾವಣ್ಣ ಹಾಲವರ್ತಿ, ಹಾಲವರ್ತಿ ಗ್ರಾಮ. ರೇಖಾ, ದೊಡ್ಡ ಓಬಜ್ಜಿ ಹಳ್ಳಿ, ದಾವಣಗೆರೆ. ಶಿಲ್ಪ ಕಲೆ ಕ್ಷೇತ್ರದಲ್ಲಿ ಡಾ.ಎಂ.ಕೆ. ಗಿರಿಶ್‍ಕುಮಾರ್, ದಾವಣಗೆರೆ. ಎ. ಷಣ್ಮುಖಾಚಾರ್ಯ, ದೇವನಾಯಕನಹಳ್ಳಿ, ಹೊನ್ನಳಿ. ಚಿತ್ರಕಲೆಯಲ್ಲಿ ಉಷಾರಾಣಿ, ದಾವಣಗೆರೆ.

ಸಂಗೀತದಲ್ಲಿ ಗೀತಾ ಮಾಲೇಶ್, ದಾವಣಗೆರೆ. ಭಜನೆ- ಎಂ.ಎನ್. ಮಾರ್ತಾಂಡಪ್ಪ, ಚಿಕ್ಕನಹಳ್ಳಿ ಬಡಾವಣೆ, ದಾವಣಗೆರೆ. ಸಾಹಿತ್ಯ ಕ್ಷೇತ್ರದಲ್ಲಿ ಸೀತಾ ನಾರಾಯಣ, ಯಂತ್ರಪುರ, ಹರಿಹರ. ಡಾ. ಎಸ್.ಹೆಚ್. ವಿನಯಕುಮಾರ್ ಸಾಹುಕಾರ್, ದಾವಣಗೆರೆ. ಮಲ್ಲಮ್ಮ ನಾಗರಾಜ್, ದಾವಣಗೆರೆ. ಸಮಾಜ ಸೇವೆ ವಿಭಾಗದಲ್ಲಿ ಚೈತ್ರಾ ಎಸ್., ಅಭಯ ಸ್ಪಂದನಾ ಸಂಸ್ಥೆ, ದಾವಣಗೆರೆ. ಮಂಜುಳಾ ಬಸವಲಿಂಗಪ್ಪ, ದಾವಣಗೆರೆ. ಆರ್.ಎಸ್. ತಿಪ್ಪೇಸ್ವಾಮಿ, ನಿಟುವಳ್ಳಿ, ದಾವಣಗೆರೆ. ಎ.ಆರ್. ವೀರಭದ್ರಪ್ಪ, ಸ್ವಾಮಿ ವಿವೇಕಾನಂದ ಬಡಾವಣೆ, ದಾವಣಗೆರೆ. ಡಾ.ಪ್ರಸಾದ್ ಬಂಗೇರ, ದಾವಣಗೆರೆ.

ಕನ್ನಡಪರ ಹೋರಾಟ ಕ್ಷೇತ್ರ: ಟಿ.ಎಂ. ಶಿವಯೋಗಿಸ್ವಾಮಿ, ಕೆಟಿಜೆ ನಗರ, ದಾವಣಗೆರೆ. ಬಸಮ್ಮ ಬಿನ್ ರಾಮಣ್ಣ, ಕೆಟಿಜೆ ನಗರ, ದಾವಣಗೆರೆ, ಅಸ್ಲಂ, ಕೆಟಿಜೆ ನಗರ, ದಾವಣಗೆರೆ. ಪತ್ರಿಕೋದ್ಯಮ ಕ್ಷೇತ್ರ: ಮಂಜುನಾಥ ಗೌರಕ್ಕನವರ್, ಮಹಮ್ಮದ್ ರಫೀಕ್, . ಎ.ಪಿ. ಸಂಜಯ್,  ಎಸ್. ಹನುಮಂತಪ್ಪ,  ಎ.ಎನ್. ಕೃಷ್ಣಮೂರ್ತಿ. ಸಂಕೀರ್ಣ ಕ್ಷೇತ್ರದಲ್ಲಿ ದಿಳ್ಯಪ್ಪ, ದಾವಣಗೆರೆ, ಸುಬ್ರಹ್ಮಣ್ಯ ನಾಡಿಗೇರ್, ಹರಿಹರ. ಕೆ.ಹೆಚ್.ಮೆಹಬೂಬ್, ದಾವಣಗೆರೆ.

ನವೋದ್ಯಮ ಕ್ಷೇತ್ರ: ಶಂಭುಲಿಂಗಪ್ಪ ಬಸವನಾಳು, ದಾವಣಗೆರೆ. ನಾಗನಗೌಡ ಮಲಕಾಜಿ, ದಾವಣಗೆರೆ. ತಂಬೂರಿ ವಾದನ-ತಂಬೂರಿ ಉಮಾನಾಯ್ಕ, ದಾವಣಗೆರೆ. ರಾಜು ಹಿರೇಮಠ, ದಾವಣಗೆರೆ. ವೈದ್ಯಕೀಯ ಕ್ಷೇತ್ರ: ಡಾ.ಎ.ಎಂ.ಶಿವಕುಮಾರ್, ದಾವಣಗೆರೆ. ಡಾ.ಎಸ್.ಬಿ.ಮುರುಗೇಶ್, ದಾವಣಗೆರೆ. ಬಯಲಾಟ ಕ್ಷೇತ್ರದಲ್ಲಿ ಎ.ಡಿ.ತಿಪ್ಪೇಸ್ವಾಮಿ, ಜಗಳೂರು. ಪರಿಸರ-ಡಾ.ಶಾಂತಭಟ್, ದಾವಣಗೆರೆ.

ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ದಾವಣಗೆರೆ ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಡಾ. ವಿಜಯ ಮಹಾಂತೇಶ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಪೊಲೀಸ್ ಇಲಾಖೆಯ ಐಜಿಪಿ ರವಿ, ಎಸ್‍ಪಿ ಸಿ.ಬಿ. ರಿಷ್ಯಂತ್, ಎಎಸ್‍ಪಿ ಎಂ. ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು, ಹಲವು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಪ್ರೇಮಿಗಳು ಭಾಗವಹಿಸಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top