ದಾವಣಗೆರೆ: 2025ನೇ ಸಾಲಿನಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲೆಯ ವಿವಿಧ ಕಡೆ ಶಿಬಿರ ಆಯೋಜಿಸಲಾಗಿದೆ.
ಪ್ರತಿ ತಿಂಗಳು 5 ತಾರೀಖು ಮಲೇಬೆನ್ನೂರಿನ ನೀರಾವರಿ ಇಲಾಖೆಯ ಸಬ್ ಡಿವಿಜನ್ ಕಚೇರಿ ಆವರಣ ಮತ್ತು ಹರಿಹರದ ಎ.ಪಿ.ಎಂ.ಸಿ ಆವರಣ. ಪ್ರತಿ ತಿಂಗಳು 10ನೇ ತಾರೀಖಿನಂದು ಚನ್ನಗಿರಿಎ.ಪಿ.ಎಂ.ಸಿ ಆವರಣ, ಪ್ರತಿ ತಿಂಗಳು 20ನೇ ತಾರೀಖಿನಂದು ಜಗಳೂರು ಎ.ಪಿ.ಎಂ.ಸಿ ಆವರಣ.
ಪ್ರತಿ ತಿಂಗಳು 23ನೇತಾರೀಖಿನಂದು ನ್ಯಾಮತಿ ಮತ್ತು ಹೊನ್ನಾಳಿ ಎ.ಪಿ.ಎಂ.ಸಿ ಆವರಣದಲ್ಲಿ ಸಾರಿಗೆ ಶಿಬಿರಗಳನ್ನು ನಡೆಸಲಾಗುವುದು ಎಂದು ಸಾರಿಗೆ ಅಧಿಕಾರಿಸಿ.ಎಸ್. ಪ್ರಮುತೇಶ್ ತಿಳಿಸಿದ್ದಾರೆ.



