ದಾವಣಗೆರೆ: ಗಣೇಶಮೂರ್ತಿ ಮೆರವಣಿಗೆ ಹಾಗೂ ಸೆ.16ರಂದು ಆಚರಿಸಲಿರುವ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ಮತ್ತು ಸರಬರಾಜನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಆದೇಶಿಸಿದ್ದಾರೆ.
ಸೆ.11 ಮತ್ತು 16ರಂದು ದಾವಣಗೆರೆ ಜಿಲ್ಲಾದ್ಯಂತ, ಸೆ.15ರಂದು ಮಹಾನಗರ ಪಾಲಿಕೆವ್ಯಾಪ್ತಯಲ್ಲಿ ಹಾಗೂ ಹರಿಹರ, ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ, ಸರಬರಾಜು ನಿಷೇಧಿಸಲಾಗಿದೆ.



