ದಾವಣಗೆರೆ: ಆರ್ ಎಸ್ ಎಸ್ ಬಾಂಬ್ ಸ್ಫೋಟಿಸುವ ಅಥವಾ ತಾಲಿಬಾನ್ ತರ ಚಟುವಟಿಕೆ ನಡೆಸುವ ಸಂಸ್ಥೆಯಲ್ಲ, ಅದೊಂದು ಸೇವಾ ಸಂಸ್ಥೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಮಾತನಾಡೋವರು 15 ದಿನ ಹೋಗಿ ಬಂದ್ರೆ ಅದರ ಚಟುವಟಿಕೆ ಏನು ಅಂತಾ ಗೊತ್ತಾಗಲಿದೆ. ಲಾಠಿ ಹಿಡಿಯೋದು ಶಿಸ್ತಿಗೋಸ್ಕರ, ಬಾಂಬ್ ಸ್ಫೋಟ, ಪ್ರಕೃತಿ ವಿಕೋಪ ದಂತಹ ಘಟನೆ ನಡದ್ರೆ, ಆರ್ ಎಸ್ ಎಸ್ ಕಾರ್ಯಕರ್ತರು ಸೇವೆ ಮಾಡಿತ್ತಾರೆ. ಇಂತಹ ಸಂಸ್ಥೆ ಬಗ್ಗೆ ತಿಳುವಳಿಕೆ ಇಲ್ಲದೇ ಮಾತಾಡುವುದು ಸರಿಯಲ್ಲ ಎಂದರು.
ಕೆಲವರು ಆರ್ ಎಸ್ ಎಸ್ ಸಿದ್ಧಾಂತ ಮೆಚ್ಚಿಕೊಂಡವರು ಇರುತ್ತಾರೆ. ಕಷ್ಟ ಪಟ್ಟು ಓದಿ ಐಎಎಸ್ ಐಪಿಎಸ್ ಸೇರಿದಂತೆ ನಾನಾ ಹುದ್ದೆಗೆ ಹೋಗುತ್ತಾರೆ. ಅದರಲ್ಲಿ ಎನ್ನವುದು ತಪ್ಪು ಏನಿದೆ ಎಂದರು. ಇದೇ ವಳೆ ಪ್ರಧಾನಿ ಮಂತ್ರಿ ಮೋದಿ ಸಂವಿಧಾನಾತ್ಮಕ ಹುದ್ದೆ ಅಲಂಕರಿಸಿ 20 ವರ್ಷ ಹಿನ್ನೆಲೆ ಸಂಸದರು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು. ಇನ್ಮು 15 ವರ್ಷ ಮೋದಿಯವರು ಅಧಿಕಾರದಲ್ಲಿದ್ದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಂ. 1 ಆಗುತ್ತದೆ. ಪ್ರಧಾನಿ ಅವರು ಬಡತನ ನಿರ್ಮೂಲನೆ, ರೈತರ ಆದಾಯ ದ್ವಿಗುಣಗೊಳಿಸಲು ಯತ್ನಿಸುತ್ತಿದ್ದಾರೆ ಎಂದರು.