ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಗಂಗಾಪರಮೇಶ್ವರಿ ನೂತನ ದೇವಸ್ಥಾನ ಉದ್ಘಾಟನೆ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಮಾ.03 ರಂದು ನಡೆಯಲಿದೆ.
ಮಾ.03 ರಂದು ಬೆಳಿಗ್ಗೆ 11.00 ಗಂಟೆಗೆ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ,ಹಿರಿಯೂರು ಸುಕ್ಷೇತ್ರ ಕೋಡಿಹಳ್ಳಿ ಮಠದ ಶ್ರೀ ಷಡಾಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ಕಾರ್ಯಕ್ರಮ ನಡೆಯಲಿದೆ. ಸಂಸದ ಜಿ.ಎಂ. ಸಿದ್ದೇಶ್ವರ್ ಕಾರ್ಯಕ್ರಮ ಉದ್ಘಾಟನೆ ನರವೇರಿಸಲಿದ್ದು, ಗ ಆಂಜನೇಯ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಗೌಡ್ರ ಸಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್ ಮೋಹನ್‌ಕುಮಾರ್ ಕೊಂಡಜ್ಜಿ, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್,ಭಾರತ್ ಸ್ಕೌಟ್ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಬಿ. ಷಣ್ಮುಖಪ್ಪ, ಮಾಜಿ ಐಪಿಎಸ್ ಅಧಿಕಾರಿ ಎನ್. ಶಿವಕುಮಾರ್ , ಹರಿಹರ ತಹಶೀಲ್ದಾರ್ ಹಾಗೂ ಕೊಂಡಜ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿರಲಿದ್ದಾರೆ.
01-03-2023ನೇ ಬುಧವಾರದಂದು ಶ್ರೀ ಮಹಾಗಣಪತಿ ಪೂಜೆ ಶುದ್ಧಿಕರ್ಮ ದೇವನಾಂದೀ ಪುಣ್ಯಾಹ ಆಲಯ ಪರಿಗ್ರಹ ಆಲಯ ಶುದ್ಧ ಬಿಂಬ ರಾಕ್ಷಘ್ನ ಹೋಮ,
ವಾಸ್ತು ಹೋಮ, ವಾಸ್ತು ಬಲಿ ದಿಗ್ನಲಿ ಶ್ರೀ ದೇವರಿಗೆ ಆಧಿವಾಸಾದಿಗಳು ಕಲಶಸ್ಥಾಪನೆ ಪೂಜೆ ನಡೆಯಲಿದೆ.
ಮಾ.02 ರಂದು ಆವರಗೊಳ್ಳದ ಪುರವರ್ಗಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿ ಸಾನಿದ್ಯದಲ್ಲಿ ನಾಗೇಶ ಭಟ್ ಪೌರೋಹಿತ್ಯದಲ್ಲಿ
ಶ್ರೀ ಸ್ಥಾನ ಶುದ್ಧಾದಿ ಪ್ರತಿಷ್ಠಾಪಹ ಹೋಮಗಳು ಬೆಳಿಗ್ಗೆ 9 ಗಂಟೆಗೆ ಸಲ್ಲುವ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ ಜೀವಕುಂಬಾಭಿಷೇಕ
ನೇತ್ರೋನ್ನಿಲನ, ಪ್ರಾಣ ಪ್ರತಿಷ್ಠಾಪನೆ, ಶಾಂತಿ ಪ್ರಾಯಶ್ಚಿತ ಹೋಮ, ತತ್ವ ಕಲಾವೃದ್ಧಿ ಹೋಮ, ಕಲಶಾಭಿಷೇಕ, ಅಲಂಕಾರ, ಮಹಾಪೂಜೆ, ಮಂಗಳಾರತಿ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.



