Connect with us

Dvgsuddi Kannada | online news portal | Kannada news online

ದಾವಣಗೆರೆ: ಫೆ.05 ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ; 25 ಸಾವಿರ ಪ್ರಥಮ ಬಹುಮಾನ

ದಾವಣಗೆರೆ

ದಾವಣಗೆರೆ: ಫೆ.05 ರಂದು ರಾಜ್ಯ ಮಟ್ಟದ ಶ್ವಾನ ಪ್ರದರ್ಶನ; 25 ಸಾವಿರ ಪ್ರಥಮ ಬಹುಮಾನ

ದಾವಣಗೆರೆ: ದಾವಣಗೆರೆ ಪೆಟ್ಸ್ ಲವರ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ ಆರನೇ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಫೆ. 5 ರಂದು ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಸೋಸಿಯೇಷನ್ ನ ಸಿರಿಶ್ , ಕಳೆದ ಐದು ವರ್ಷದಿಂದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನ ನಡೆಸಲಾಗುತ್ತಿದೆ. ಫೆ.5ರಂದು ಭಾನುವಾರ ಬೆಳಗ್ಗೆ 9 ರಿಂದ ಪ್ರದರ್ಶನ ಪ್ರಾರಂಭವಾಗಲಿದೆ.‌ ಬೆಳಗ್ಗೆ 11.30 ರ ವರೆಗೆ ಸ್ಥಳದಲ್ಲೇ ನೋಂದಣಿಗೆ ಅವಕಾಶ ಇದೆ. ಫೆ. 4 ರ ವರೆಗೆ ನೋಂದಣಿಗೆ 400 ರೂಪಾಯಿ, ನಂತರ ಮಾಡಿದವರಿಗೆ 600 ರೂಪಾಯಿ ನಿಗದಿಪಡಿಸಲಾಗಿದೆ. ಬೆಸ್ಟ್ ಆಲ್ ಬ್ರೀಡ್ ಹ್ಯಾಂಡ್ಲರ್ ದಿಲೀಪ್ ಗೌಡ ಭಾಗವಹಿಸುವರು ಎಂದು ತಿಳಿಸಿದರು.

ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಡಾಬರ್ ಮನ್, ರ್ಯಾಟ್ ವ್ಹೀಲರ್, ಗ್ರೇಟ್ ಡೆನ್, ಬೆಲ್ಜಿಯಂ ಮೆಲೋನಿಸ್, ಹಸ್ಕಿ, ಭಾರತೀಯ ತಳಿಯ ಮುಧೋಳ್ ಮಾತ್ರವಲ್ಲ ಬೀದಿನಾಯಿ ಗಳಿಗೂ ಅವಕಾಶ ಇದೆ. ಭಾರತೀಯ ತಳಿಗೆ ನೋಂದಣಿ ಶುಲ್ಕ ಇಲ್ಲ ಎಂದು ತಿಳಿಸಿದರು.ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಇತರೆಡೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ 300- 350 ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದರು.

ಪ್ರಥಮ ಬಹುಮಾನವಾಗಿ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾ 10 ಸಾವಿರ ನಗದು ನೀಡಲಾಗುವುದು. ಬೆಸ್ಟ್ ಇನ್ ಪಪ್ಪಿ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 5 ಸಾವಿರ ದ್ವಿತೀಯ ಬಹುಮಾನ 3 ಸಾವಿರ, ತೃತೀಯ ಬಹುಮಾನ 2 ಸಾವಿರ, ಭಾರತೀಯ ತಳಿ ವಿಭಾಗದಲ್ಲಿ ಬೆಸ್ಟ್ ಅಡಲ್ಟ್ ವಿಭಾಗದಲ್ಲಿ 3, ಬೆಸ್ಟ್ ಪಪ್ಪಿ ವಿಭಾಗದಲ್ಲಿ 2 ಸಾವಿರ ನೀಡಲಾಗುವುದು. ಬೆಸ್ಟ್ ಹ್ಯಾಂಡಲ್ ಹಾಗೂ ಹ್ಯಾಂಡಲ್ ವಿಭಾಗದಲ್ಲಿ ಒಂದು ಸಾವಿರ ರೂಪಾಯಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 74110- 45604, 94498- 85044 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.ಬಿ.ಎಸ್. ಗುರುರಾಜ್, ಮನೋಜ್, ಶಿವಕುಮಾರ್, ಅರವಿಂದ್ ನಾಗರಾಜ್, ಅಭಿನಂದನ್, ವಿನಾಯಕ ಇತರರು ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top