Connect with us

Dvgsuddi Kannada | online news portal | Kannada news online

10 ಲಕ್ಷ ಜನ ಸಂಖ್ಯೆಯ ನಗರಗಳಲ್ಲಿ ಸುಲಲಿತ ಜೀವನಕ್ಕೆ ದಾವಣಗೆರೆ ಪ್ರಥಮ ಸ್ಥಾನ..!

ದಾವಣಗೆರೆ

10 ಲಕ್ಷ ಜನ ಸಂಖ್ಯೆಯ ನಗರಗಳಲ್ಲಿ ಸುಲಲಿತ ಜೀವನಕ್ಕೆ ದಾವಣಗೆರೆ ಪ್ರಥಮ ಸ್ಥಾನ..!

ದಾವಣಗೆರೆ: ಸುಲಲಿತ ಜೀವನ ಸೂಚ್ಯಂಕ-2019ದಲ್ಲಿ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ ದಾವಣಗೆರೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ.

ಇನ್ನು ದೇಶದಲ್ಲಿ 9ನೇ ಸ್ಥಾನ ಪಡೆದಿದೆ. 10 ಲಕ್ಷ ಜನಸಂಖ್ಯೆ ಮೇಲಿನ ನಗರಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂ.ಒ.ಎಚ್.ಯು.ಎ) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ದೃಢಪಟ್ಟಿದ್ದು, ಸಚಿವಾಲಯ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೆಬ್ರುವರಿ 2020ರಲ್ಲಿ ಸ್ಮಾರ್ಟ್ ಸಿಟಿವತಿಯಿಂದ ಆನ್‌ಲೈನ್ ಸಮೀಕ್ಷೆ ನಡೆಸಲಾಗಿತ್ತು.

ಆರೋಗ್ಯ, ಶಿಕ್ಷಣ, ರಸ್ತೆ, ಕುಡಿಯುವ ನೀರು, ಸಂವಹನ ಸೌಲಭ್ಯ, ಸಾರಿಗೆ ಸೇರಿ ಮೂಲಸೌಲಭ್ಯಗಳನ್ನು ಆಧರಿಸಿ ಈ ಸಮೀಕ್ಷೆ ನಡೆಸಿದೆ.2019ರ ಸಮೀಕ್ಷೆಯಲ್ಲಿ 111 ನಗರಗಳಲ್ಲಿ 100 ಸ್ಮಾರ್ಟ್‌ಸಿಟಿಗಳು ಭಾಗವಹಿಸಿದ್ದವು.ರಾಜ್ಯದ ಮಂಗಳೂರು. ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬಾಗಲಕೋಟೆ, ತುಮಕೂರು, ಬೆಳಗಾವಿ ನಗರಗಳು ಪಾಲ್ಗೊಂಡಿದ್ದವು. ಈ ಹಿಂದೆ 2017ರ ಸಮೀಕ್ಷೆಯಲ್ಲಿ 100 ಸ್ಮಾರ್ಟ್‌ ಸಿಟಿಯಲ್ಲಿ ದಾವಣಗೆರೆ 83ನೇ ಸ್ಥಾನದಲ್ಲಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top