ದಾವಣಗೆರೆ: ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗಾಗಿ ರಾಜ್ಯಾದ್ಯಂತ ನೂತನ “ಅಕ್ಕಪಡೆ” ಜಾರಿಗೆ ತಂದಿದೆ. ದಾವಣಗೆರೆ ನಗರ ಸೇರದಂತೆ ಜಿಲ್ಲೆಯಾದ್ಯಾಂತ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗಾಗಿ ದಾವಣಗೆರೆ ಜಿಲ್ಲೆಯ ಅಕ್ಕ ಪಡೆಯ ಎಸ್ಪಿ ಉಮಾ ಪ್ರಶಾಂತ್ ನಿರ್ದೇಶನದಲ್ಲಿ ಕಾರ್ಯೋನ್ಮುಖವಾಗಿದೆ.
ದಾವಣಗೆರೆ: ಆಕಸ್ಮಿಕ ಬೆಂಕಿಗೆ ನಾಲ್ವರು ರೈತರ 9 ಎಕರೆ ಅಡಿಕೆ ಮರ ಸುಟ್ಟು ಭಸ್ಮ; ಸುಮಾರು 15.50 ಲಕ್ಷ ನಷ್ಟ
ದಾವಣಗೆರೆ ಜಿಲ್ಲೆಯ ಅಕ್ಕಪಡೆಯೂ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಶಾಲಾ ಕಾಲೇಜು, ಪಾರ್ಕ್ ಗಳು, ಮಹಿಳಾ ವಸತಿ ನಿಲಯಗಳು, ಬಸ್ ನಿಲ್ದಾಣಗಳು ಸೇರಿದಂತೆ ಜನ ಸಂದಣಿ ಹಾಗೂ ನಗರದ ಹೊರವಲಯಗಳಲ್ಲಿ ಸಂಚರಿಸುವ ಮಹಿಳೆಯರಿಗೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.
ಇಂದು ಮಲೇಬೆನ್ನೂರಿಗೆ ಭೇಟಿ ನೀಡಿದ್ದು, ಮಲೇಬೆನ್ನೂರಿನ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಮಾನ್ಯ ಘನ ಸರ್ಕಾರ ಮಹಿಳೆಯರ & ಮಕ್ಕಳ ಸುರಕ್ಷತೆಗಾಗಿ ರಾಜ್ಯಾದ್ಯಂತ ಜಾರಿಗೆ ತಂದಿರುವ ನೂತನ ಅಕ್ಕಪಡೆ ಬಗ್ಗೆ ತಿಳಿಸಿರುತ್ತಾರೆ. ನಂತರ ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098, ಸೈಬರ್ ಕ್ರೈಂ ಸಹಾಯವಾಣಿ 1930 ಬಗ್ಗೆ ಹಾಗೂ ಸರಗಳ್ಳತನದಿಂದ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡಿರುತ್ತಾರೆ.
ನಂತರ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರು ಸೇರಿದಂತೆ ಸಾರ್ವಜನಿಕರೊಂದಿಗೆ ಸಭೆ ನಡೆಸಿ ತುರ್ತು ಸಹಾಯವಾಣಿ 112, ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098, ಸೈಬರ್ ಕ್ರೈಂ 1930 ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳು ಹಾಗೂ ಅದಕ್ಕಿರುವ ಕಾನೂನು ಕ್ರಮಗಳ ಬಗ್ಗೆ, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳು ಹಾಗೂ ಮಾದಕ ದ್ರವ್ಯಗಳ ಮಾರಾಟ & ಸಾಗಟ ಮಾಡುವರ ವಿರುದ್ಧ ಇರುವ ಕಾನೂನು ಕ್ರಮಗಳ ಬಗ್ಗೆ ತಿಳಿಸಿರುತ್ತಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೌಟಂಬಿಕ ದೌರ್ಜನ್ಯಗಳಿಂದ ಸುರಕ್ಷಿತವಾಗಿರಲು ಇರುವ ಕಾನೂನುಗಳ ಬಗ್ಗೆ ಹಾಗೂ ಬಾಲಾಪರಾಧಗಳಿಗೆ ಇರುವ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ನಂತರ ಕೊಕ್ಕನೂರಿನಲ್ಲಿರುವ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಗೆ ಭೇಟಿ ನೀಡಿ ಶಾಲಾ ವಿದ್ಯಾರ್ಥಿಗಳಿಗೆ ತುರ್ತು ಸಹಾಯವಾಣಿಗಳ ಬಗ್ಗೆ, ಮಕ್ಕಳ ಸುರಕ್ಷೆ ಬಗ್ಗೆ ಇರುವ ಕಾನೂನುಗಳ ಬಗ್ಗೆ , ಸೈಬರ್ ಅಪರಾಧಗಳಿಂದ ಸುರಕ್ಷತೆ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿರಬೇಕಾದ ಸುರಕ್ಷತೆ ಬಗ್ಗೆ, ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. ವಿದ್ಯಾದೇಸೆಯಲ್ಲಿ ಶಾಲಾ ಮಕ್ಕಳಿಗೆ ಇರಬೇಕಾದ ಅರಿವುಗಳ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ. ಮಾದಕ ದ್ರವ್ಯಗಳ ದುಷ್ಪರಿಣಾಮಗಳು, ಅತಿಯಾದ ಮೊಬೈಲ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಸಮಯದಲ್ಲಿ, ಉದ್ಯೋಗ ನಿರ್ವಹಿಸುವ ಸಮಯದಲ್ಲಿ ಜಾಗದಲ್ಲಿ ಯಾವುದಾರೂ ತೊಂದರೆಗಳು ಕಂಡು ಬಂದರೆ ಅಂತಹ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳು ಹಾಗೂ ಹೆಣ್ಣು ಮಕ್ಕಳು ಬಸ್ ಹಾಗೂ ಇತರೆ ವಾಹನಗಳಲ್ಲಿ ಸಂಚಾರ ಮಾಡುತ್ತಿರಬೇಕಾದರೆ ಬೀದಿ ಕಾಮಣ್ಣರು / ಪುಡಾರಿಗಳಿಂದ ತೊಂದರೆ ಕಂಡು ಬಂದಲ್ಲಿ ಆ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು & ಮಹಿಳಾ ಸಹಾಯವಾಣಿಗಳನ್ನು ಹೇಗೆ ಬಳಸಿಕೊಳ್ಳಬೇಕು, ಅಂತಹವರ ವಿರುದ್ಧ ಹೇಗೆ ಎಚ್ಚೆತ್ತುಕೊಳ್ಳಬೇಕು ಎಂಬುದನ್ನು ತಿಳಿಸಿದರು.
ವಿದ್ಯಾರ್ಥಿನಿಯರಿಗೆ ಗುಡ್ ಟಚ್ ಮತ್ತು ಬ್ಯಾಡ ಟಚ್ ಬಗ್ಗೆ ಜಾಗೃತಿ ಮೂಡಿಸಿದ್ದು ಸ್ವಯಂ ರಕ್ಷಣಾ ಕೌಶಲ್ಯಗಳ ಬಗ್ಗೆ ತಿಳಿಹೇಳಿರುತ್ತಾರೆ. ಯಾವುದೇ ತುರ್ತು ಸೇವೆಗಾಗಿ 112 ಕ್ಕೆ ಕರೆ ಮಾಡಲು ಹಾಗೂ ಯಾವುದೇ ಸಮಸ್ಯಗಳಿದ್ದರೂ ಅಕ್ಕಪಡೆಗೆ ಕರೆ ಮಾಡಿ ತಿಳಿಸುವಂತೆ ಹಾಗೂ ಅಕ್ಕಪಡೆ ಇರುವುದೇ ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆ ಬಗ್ಗೆ ತಿಳಿ ಹೇಳಿದರು.



