ದಾವಣಗೆರೆ: ಚಿನ್ನದ ವ್ಯಾಪಾರಿಗಳ ಜತೆ ಸೇರಿ ಚಿನ್ನ ತಯಾರಿಕನಿಂದ ಚಿನ್ನ ದರೋಡೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಪಿಎಸ್ ಐ ಗಳನ್ನು ಅಮಾನತ್ತು (PSI suspension) ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ದಾವಣಗೆರೆ: ಪೊಲೀಸರೇ ಚಿನ್ನದ ದರೋಡೆಗೆ ಸಾಥ್; ಇಬ್ಬರು ಪಿಎಸ್‌ಐ ಸೇರಿದಂತೆ 7 ಆರೋಪಿಗಳ ಬಂಧನ 8 ಲಕ್ಷ ಮೌಲ್ಯದ ಚಿನ್ನ ವಶ
ಆರೋಪಿಗಳಾದ ಎ1 ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಪ್ರೋ. ಪಿಎಸ್‌ಐ ಹಂಸಭಾವಿ ಪೊಲೀಸ್ ಠಾಣೆ ಹಾಗೂ ಎ2 ಪ್ರವೀಣ್‌ಕುಮಾರ್ (ಪಿಎಸ್‌ಐ-1 ಸಾಗರ ಟೌನ್ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯ ಆದೇಶದಲ್ಲಿರುವ) ಇವರನ್ನು ಅಮಾನತ್ತು ಮಾಡಲಾಗಿದೆ.
ದಾವಣಗೆರೆ-ಮಂತ್ರಾಲಯ ಎಸಿ ವೋಲ್ವೊ ಬಸ್ ಸೌಲಭ್ಯಕ್ಕೆ ಸಂಸದೆ ಚಾಲನೆ; ಸಮಯ, ಮಾರ್ಗ, ದರ ಪಟ್ಟಿ ಮಾಹಿತಿ ಇಲ್ಲಿದೆ..
ಈ ಇಬ್ಬರು ಪಿಎಸ್ ಐ ಗಳು ದಿನಾಂಕ: 24/11/2025 ರಂದು ಬೆಳಗಿನ ಜಾವ 03 ಗಂಟೆಗೆ ಪರಿಚಯವಿರುವ ಮೂವರು ಚಿನ್ನದ ವ್ಯಾಪಾರಿಗಳ ಜೊತೆ ಸೇರಿಸಿಕೊಂಡು ಕಾರವಾರದ ಆಭರಣ ತಯಾರಿಕೆಗಾರ ವಿಶ್ವನಾಥ್ ಎಂ ಅರ್ಕಸಾಲಿ ಎಂಬುವವರಿಂದ ದಾವಣಗೆರೆ ಬಸ್ ನಿಲ್ದಾಣದಲ್ಲಿ 78.15 ಗ್ರಾಂ ಬಂಗಾರದ ಗಟ್ಟಿ ಹಾಗೂ ಬಂಗಾರದ ಆಭರಣ ದರೋಡೆ ನಡೆಸಿದ್ದರು.
ಈ ಕುರಿತು ದಾವಣಗೆರೆ ಜಿಲ್ಲೆಯ ಕೆಟಿಜೆ ನಗರ ಪೊಲೀಸ್ ಠಾಣೆಯ ಘೋರ ಅಪರಾಧ ಪ್ರಕರಣದಲ್ಲಿ ಕ್ರಮವಾಗಿ ಎ-1 ಮತ್ತು ಎ-2 ಸೇರಿ 7 ಜನರನ್ನು ಬಂಧಿಸಲಾಗಿತ್ತು. ಸಾರ್ವಜನಿಕರಿಗೆ ರಕ್ಷಣೆ ನೀಡುವ ಮತ್ತು ನೊಂದವರಿಗೆ ನ್ಯಾಯಕೊಡಿಸುವಂತಹ ಬಹುಮಖ್ಯವಾದ ಜವಾಬ್ದಾರಿಯುತ ಪಿಎಸ್‌ಐ ಹುದ್ದೆಯಲ್ಲಿದ್ದುಕೊಂಡು, ಇಂತಹ ಘೋರ ಅಪರಾಧ ಕೃತ್ಯವನ್ನು ಎಸಗಿದ ಕಾರಣ ಪ್ರಕರಣದ ಎ-1 ಆರೋಪಿ ಪಿಎಸ್ ಐ ಮಾಳಪ್ಪ ಯಲ್ಲಪ್ಪ ಚಿಪ್ಪಲಕಟ್ಟಿ ಇನ್ನೂ ಪಿಎಸ್‌ಐ ಹುದ್ದೆಯ ಪರೀಕ್ಷಾರ್ಥ ಅವಧಿಯಲ್ಲಿರುವುದರಿಂದ ದಿನಾಂಕ: 24/11/2025ರಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾ ಮಾಡಲಾಗಿದೆ.
ಪ್ರಕರಣದ ಎ-2 ಆರೋಪಿ ಪಿಎಸ್ ಐ ಪ್ರವೀಣ್‌ಕುಮಾರ್ 24/11/2025 ರಿಂದಲೇ ಸೇವೆಯಿಂದ ಅಮಾನತ್ತುಗೊಳಿಸಿ ಪೊಲೀಸ್ ಇಲಾಖಾ ವಿಚಾರಣೆಗೆ ಆದೇಶಿಸಿದೆ.



