ದಾವಣಗೆರೆ: ಕೆಎಸ್ಆರ್ ಟಿಸಿ (ksrtc) ಬಸ್ ನಿಲ್ದಾಣದಲ್ಲಿ ಹೊಂಚು ಹಾಕಿ ಚಿನ್ನಾಭರಣದ ಬ್ಯಾಗ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಅನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 12 ಲಕ್ಷ ಮೌಲ್ಯದ ಚಿನ್ನ ಸಹಿತ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಹರಪನಹಳ್ಳಿಯ ಕೊಟ್ರಯ್ಯ ಕೆ.ಎಂ ತನ್ನ ಹೆಂಡತಿಯೊಂದಿಗೆ ದಿನಾಂಕ:07-08-2025 ರಂದು ದಾವಣಗೆರೆಯಿಂದ ಬೆಂಗಳೂರಿಗೆ ಹೋಗಲು ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ 1.30 ಹೊತ್ತಿಗೆ ಬಂದಿದ್ದರು. ಈ ವೇಳೆ ಜನ ಸಂದಣಿಯಲ್ಲಿ ಬಸ್ ಹತ್ತುತ್ತಿದ್ದಾಗ ಯಾರೋ ಕಳ್ಳರು ಬ್ಯಾಗಿನ ಜಿಪ್ ಓಪನ್ ಮಾಡಿ ಬ್ಯಾಗಿನಲ್ಲಿ 102 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 75,000/- ರೂ ನಗದು ಹಣವನ್ನು ಇಟ್ಟುಕೊಂಡಿದ್ದ ಚಿಕ್ಕ ಹ್ಯಾಂಡ್ ಬ್ಯಾಗನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆ ಮಾಡಿ ನಮ್ಮ ಚಿನ್ನದ ಆಭರಣಗಳನ್ನು ಪತ್ತೆ ಮಾಡಿಕೊಡಿ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ. ಹೆಚ್. ಮತ್ತು ಡಿವೈಎಸ್ಪಿ ಶರಣ ಬಸವೇಶ್ವರ.ಬಿ.ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್.ಎಸ್. ನೇತೃತ್ವದ ದಿನಾಂಕ:13.11.2025 ರಂದು ಆರೋಪಿಗಳಾದ
ಎ1 ಸೆಲ್ವಿ ಗಂಡ ಲೇಟ್ ವೆಲ್ ಪಾಂಡಿ, 45 ವರ್ಷ , ಬುಟ್ಟಿ ಎಣೆಯುವ ಕೆಲಸ, ವಾಸ- ಶಾಂತಿನಗರ ಪಂಪ್ ಹೌಸ್, ಬಂಗಾರಪೇಟೆ, ಕೋಲಾರ (ಜಿ).
ಎ2 ವಲ್ಲಿ ಗಂಡ ಲೇಟ್ ಅರುಲ್, 42 ವರ್ಷ , ಊದುಬತ್ತಿ ತಯಾರಿಕೆ ಕೆಲಸ, ವಾಸ-ಜಯಮಾಧನಗರ, ತಿರುಪ್ಪತ್ತೂರು (ತಾ), ಜೋಲಾರಪೇಟೆ (ಜಿ), ತಮಿಳುನಾಡು ರಾಜ್ಯ, ಮತ್ತು
ಎ3 ಪ್ರೀತಿ ಗಂಡ ಮಧು.ಆರ್, 30 ವರ್ಷ , ಊದುಬತ್ತಿ ತಯಾರಿಕೆ ಕೆಲಸ, ವಾಸ-1 ಶಾಂತಿನಗರ ಪಂಪ್ ಹೌಸ್, ಬಂಗಾರಪೇಟೆ, ಕೋಲಾರ (ಜಿ) ಇವರನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಕಳ್ಳತನ ಮಾಡಿಕೊಂಡು ಹೋಗಿದ್ದ 1)ಕೆ.ಟಿಜೆ ನಗರ ಪೊಲೀಸ್ ಠಾಣೆ ಗುನ್ನೆ ನಂ-159/2025 ಕಲಂ-303(2) ಬಿ.ಎನ್.ಎಸ್. ಪ್ರಕರಣದ 10,00,000/-ರೂ ಬೆಲೆಯ 102 ಗ್ರಾಂ ಬಂಗಾರದ ಆಭರಣಗಳು ಮತ್ತು 2) ಕೆ.ಟಿಜೆ ನಗರ ಪೊಲೀಸ್ ಠಾಣೆ ಗುನ್ನೆ ನಂ-194/2025 ಕಲಂ-303(2) ಬಿ.ಎನ್.ಎಸ್. ಪ್ರಕರಣದ 2,00,000/-ರೂ ಬೆಲೆ 20 ಗ್ರಾಂ ಬಂಗಾರದ ಆಭರಣಗಳು ಒಟ್ಟು 2 ಪ್ರಕರಣಗಳ ಒಟ್ಟು 12,00,000/-ರೂ ಬೆಲೆಯ 122 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.



