Connect with us

Dvgsuddi Kannada | online news portal | Kannada news online

ದಾವಣಗೆರೆ: ಒಂಟಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ‌ ಮಾಡಿ ಮನೆ ದರೋಡೆ; ಆರೋಪಿಗಳ ಬಂಧನ-18 ಲಕ್ಷ ಮೌಲ್ಯದ ಸ್ವತ್ತು ವಶ

dvg police

ಪ್ರಮುಖ ಸುದ್ದಿ

ದಾವಣಗೆರೆ: ಒಂಟಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ‌ ಮಾಡಿ ಮನೆ ದರೋಡೆ; ಆರೋಪಿಗಳ ಬಂಧನ-18 ಲಕ್ಷ ಮೌಲ್ಯದ ಸ್ವತ್ತು ವಶ

ದಾವಣಗೆರೆ: ಹಾಡಹಗಲೇ ಮನೆಗೆ ನುಗ್ಗಿ, ಒಂಟಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ‌ನೆಸಿ, ಮನೆ ದರೋಡೆ ಮಾಡಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 18 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಶಿವಮೂರ್ತಿ ಎಸ್ ಎನ್ನುಔರು ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ನಾನು ಹಾಗು ನನ್ನ ಹೆಂಡತಿ ಕೆಲಸಕ್ಕೆ ಹೋಗಿದ್ದಾಗ ನಮ್ಮ ಮನೆಯಲ್ಲಿ ನನ್ನ ತಾಯಿ ಒಬ್ಬರೇ ಇದ್ದು ಯಾರೋ ಕಳ್ಳರು ನಮ್ಮ ಮನೆಗೆ ನುಗ್ಗಿ ನಮ್ಮ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಗಾಯಗೊಳಿಸಿ ನಮ್ಮ ಮನೆಯಲ್ಲಿ ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ 180 ಗ್ರಾಂ ತೂಕದ ಬಂಗಾರದ ಆಭರಣ, 500 ಗ್ರಾಂ ಬೆಳ್ಳಿ ಸಾಮಾನುಗಳು ಹಾಗು 15 ಸಾವಿರ ರೂ ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ್ದರು.

ಈ ದೂತಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಹಗಲಿನಲ್ಲಿ ಮನೆಯಲ್ಲಿ ವಯಸ್ಸಾದದ ಒಂಟಿ ಮಹಿಳೆಯ ಇರುವ ಸಮಯ ನೋಡಿಕೊಂಡು, ದರೋಡೆಕೋರರು ವೃದ್ದೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬೆಳ್ಳಿ ಬಂಗಾರ ಆಭರಣಗಳು ಹಾಗೂ ನಗರದನ್ನು ದರೋಡೆ ಮಾಡಿದ್ದರು. ಈ‌ ಘಟನೆಯಿಂದ ನಗರದ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು. ಮಾಹಿತಿ ಬಂದ ಕೂಡಲೇ ಪ್ರಕರಣದ ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಯಲ್ಲಿ ಬೇಟಿ ಮಾಡಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಆರೋಪಿತರ ಪತ್ತೆಗಾಗಿ ತನಿಖಾಧಿಖಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದರು.

‌ಈ ಪ್ರಕರಣದ ಆರೋಪಿ ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ ನಿರ್ದೇಶನದಲ್ಲಿ, ಎಎಸ್ಪಿಗಳಾ್ ವಿಜಯಕುಮಾರ. ಎಂ. ಸಂತೋಷ್ ಮತ್ತು ಶ್ರೀ ಜಿ..ಮಂಜುನಾಥ, ಡಿವೈ ಎಸ್ಪಿ ಶರಣ ಬಸವೇಶ್ವರ ಬಿ ಮಾರ್ಗದರ್ಶನದಲ್ಲ್ಲಿ ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್, ಕೆಟಿಜೆ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಸುನಿಲ್ ಕುಮಾರ ಹೆಚ್ ಎಸ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.

ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿ, ತಾಂತ್ರಿಕ ಹಾಗೂ ಭೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ವಿವಿಧ ಕಡೆಗಳಲ್ಲಿ ಕಾರ್ಯಚರಣೆ ನಡೆಸಿ, ಮೇಲ್ಕಂಡ ದರೋಡೆ ಪ್ರಕರಣದ ಆರೋಪಿತರ ಜಾಡನ್ನು ಪತ್ತೆಮಾಡಿದ್ದು, ಈ ತಂಡವು ದಿನಾಂಕ: 26.03.2025 ರಂದು ಪ್ರಕರಣದ ಎ1 ಆರೋಪಿ ನವೀನ್ ಕುಮಾರ ಜಿ ಎಸ್ @ ಅಣ್ಣಾ ಬಾಂಡ್ ನವೀನ್ (31) ಪಿ ಗೊಲ್ಲಹಳ್ಳಿ ಗ್ರಾಮ, ಬೆಳ್ಳಾವಿ ಹೋಬಳಿ ತುಮಕೂರು ತಾ ಇತನನ್ನು ಬಙ್ನ ಮಾಡಲಾಗಿದೆ.‌

ಆರೋಪಿತನನ್ನು ವಿಚಾರಣೆ ನಂತರ ಆರೋಪಿತನ ಮಾಹಿತಿ ಮೇರೆಗೆ ಪ್ರಕರಣದಲ್ಲಿನ ಇನ್ನುಳಿದ ಆರೋಪಿತರಾದ 2) ಮಂಜಪ್ಪ ಎನ್ @ ಅತ್ತಿಗೆರೆ ಮಂಜಪ್ಪ @ ಆವರಗೆರೆ ಮಂಜಪ್ಪ‌(60), ವರ್ಷ, ವಾಸ: ಅತ್ತಿಗೆರೆ ಗ್ರಾಮ ದಾವಣಗೆರೆ, 3) ಚಂದ್ರಪ್ಪ(54), ವಾಸ: ಹೊಸೂರು ಗ್ರಾಮ ಕೋಡಿ ಹತ್ತಿರ ಶಿರಾ ತಾ, ತುಮಕೂರು ಜಿಲ್ಲೆ 4) ಸತೀಶ ಕೆ, (38), ಹೊಟೆಲ್ ಕೆಲಸ, ವಾಸ: ಅರ್ಕಾವತಿ ಬಡಾವಣೆ ಬಾಬುಸಾ ಪಾಳ್ಯ ಬೆಂಗಳೂರು ಇವರನ್ನು ಬಂಧನ ಮಾಡಲಾಗಿದೆ.
ದಸ
ಆರೋಪಿತನ ಹಿನ್ನೆಲೆ: ಆರೋಪಿತ ನವೀನ್ ಕುಮಾರ ಈ ಹಿಂದೆ ಹಲವು ಪ್ರಕರಣಗಳಲ್ಲಿ ಆರೋಪಿತನಾಗಿದ್ದು, ಮಂಗಳೂರು ದೇವಾಸ್ಥಾನ ಕಳವು ಪ್ರಕರಣದಲ್ಲಿ 2019 ಬಂಧನವಾಗಿದ್ದು, 2023 ರಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಾನೆ ನಂತರ ಬೆಂಗಳೂರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನ ಪ್ರಕರಣದಲ್ಲಿ 2024 ಮಾರ್ಚ್ ನಲ್ಲಿ ಬಂಧನವಾಗಿ ನಂತರ ಬಿಡುಗಡೆಯಾಗಿದ್ದು, ನಂತರ ಈ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಠಾಣೆಯಲ್ಲಿ ಸುಲಿಗೆ ಪ್ರಕರಣದಲ್ಲಿ ಬಂಧನವಾಗಿದ್ದು, ಬಿಡುಗಡೆಯಾಗಿರುತ್ತಾನೆ.

2024 ಮೇ ತಿಂಗಳಲ್ಲಿ ಹಬ್ಬಿನಹೊಳೆಯಲ್ಲಿ ಒಂದು ಸುಲಿಗೆ ಮಾಡಿರುತ್ತಾನೆ. 2024 ಆಗಸ್ಟ್ ರಲ್ಲಿ ಆಂಧ್ರ ಪ್ರದೇಶದ ರೊಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಬಂಗಾರದ ಸರವನ್ನು ಸುಲಿಗೆ ಮಾಡಿರುತ್ತಾನೆ. 2024 ನವಂಬರ್ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪರಿಗೆನಹಳ್ಳಿ ಗ್ರಾಮದಲ್ಲಿ ಓರ್ವ ವೃದ್ದೆಯನ್ನು ಆತ್ಯಚಾರ ಮಾಡಿ, ಕೊಲೆ ಮಾಡಿ ವೃದ್ದೆಯ ಬಳಿ ಇದ್ದ ಬಂಗಾರ ಆಭರಣಗಳನ್ನು ಕಿತ್ತುಕೊಂಡು ಬಂದಿರುತ್ತಾನೆ.‌ 2025 ಫೆಬ್ರವರಿಯಲ್ಲಿ ಶ್ರೀ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗೇರೆ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತಲೆ ಹೊಡೆದು ಮಹಿಳೆ ಧರಿಸಿದ್ದ ಬಂಗಾರದ ಸರ, ಕಿವಿಯೋಲೆ ಕಿತ್ತುಕೊಂಡು ಬಂದಿರುತ್ತಾನೆ.

ನಂತರ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಎಸ್.ಲೇಔಟ್ ನಲ್ಲಿ ಮಾರ್ಚ್ 21 ರಂದು ಒಂಟಿ ವೃದ್ದೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಣ ಮತ್ತು ಬಂಗಾರ, ಬೆಳ್ಳಿಯ ಆಭರಣಗಳನ್ನು ದರೊಡೆ ಮಾಡಿರುತ್ತಾನೆ. ಈಗಾಗಲೇ ಸದರಿ ಆರೋಪಿತನ ಮೇಲೆ 18 ವಾರೆಂಟ್‌ಗಳು ಜಾರಿಯಾಗಿರುತ್ತವೆ.

ಎ1 ಆರೋಪಿತ ನವೀನ್ ಕುಮಾರ.ಜಿ.ಎಸ್ @ ಅಣ್ಣಾ ಬಾಂಡ್ ನವೀನ್ ಈತನು ಕುಖ್ಯಾತ ಕಳ್ಳನಾಗಿದ್ದು, ಈತನ ವಿರುದ್ಧ ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ, ಹದಡಿ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು ಸೇರಿದಂತೆ, ಹಾಸನ, ಚಿಕ್ಕಮಗಳೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಬೆಂಗಳೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಆಂದ್ರಪ್ರದೇಶ ರಾಜ್ಯದ ರತ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಸರಗಳ್ಳತನ, ಮನೆಕಳ್ಳತನ, ದೇವಾಸ್ಥಾನ ಕಳ್ಳತನ, ಬೈಕ್ ಕಳ್ಳತನ, ಅತ್ಯಾಚಾರ, ಕೊಲೆ ಮುಂತಾದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 54 ಕ್ಕೂ ಹೆಚ್ಚು ಮನೆಗಳ್ಳತನ, ಬೈಕ್ ಕಳ್ಳತನ, ಸರಗಳ್ಳತನ, ಸುಲಿಗೆ ಹಾಗೂ ಆತ್ಯಚಾರ, ಕೊಲೆಯಂತ ಘೋರ ಪ್ರಕರಣಗಳು ದಾಖಲಾಗಿರುತ್ತವೆ.

ಆರೋಪಿತರ ಬಂಧನದಿಂದ ಪತ್ತೆಯಾದ ಪ್ರಕರಣಗಳ ವಿವರ:ಆರೋಪಿತರಿಂದ ವಿವಿಧ ಕಡೆಗಳಲ್ಲಿ ಕಳ್ಳತನ, ಸುಲಿಗೆ, ದರೋಡೆ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಒಟ್ಟು 10 ಪ್ರಕರಣಗಳಿಗೆ 18,00,000/- ರೂ ಬೆಲೆ ಒಟ್ಟು 186 ಗ್ರಾಂ ತೂಕದ ಬಂಗಾರದ ಆಭರಣಗಳು, 475 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು ಹಾಗು 05 ಬೈಕುಗಳನ್ನು ವಶ ಪಡಿಸಿಕೊಳ್ಳಲಾಗಿರುತ್ತದೆ.

ಎ1 ಆರೋಪಿಯು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಕೊಲೆ ಹಾಗು ದರೋಡೆ ಪ್ರಕರಣ ಕೂಡ ಪತ್ತೆಯಾಗಿರುತ್ತದೆ. ಸದರಿ ಆರೋಪಿತರ ಬಂಧನದಿಂದದ ವಿದ್ಯಾ ನಗರ ಪೊಲೀಸ್ ಠಾಣೆಯ ಒಂದು ದರೋಡೆ ಪ್ರಕರಣ, ಚಿತ್ರದುರ್ಗ ಜಿಲ್ಲೆ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯ ಒಂದು ಕೊಲೆ ದರೋಡೆ ಪ್ರಕರಣ, ಅಬ್ಬಿನಹೊಳೆ ಪೊಲೀಸ್ ಠಾಣೆಯ ಒಂದು ಸುಲಿಗೆ ಪ್ರಕರಣ, ಆಂದ್ರ ಪ್ರದೇಶದ ರೊಳ್ಳ ಪೊಲೀಸ್ ಠಾಣೆಯ ಒಂದು ಸುಲಿಗೆ ಪ್ರಕರಣ, ಶ್ರೀ ರಾಮಪುರ ಪೊಲೀಸ್ ಠಾಣೆಯ ಒಂದು ಸುಲಿಗೆ ಪ್ರಕರಣ ಹಾಗು ಚಿತ್ರದುರ್ಗ ಜಿಲ್ಲೆ ನಾಲ್ಕು ಬೈಕ್ ಕಳ್ಳತನ ಪ್ರಕರಣಗಳು, ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಒಂದು ಬೈಕ್ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 05 ಘೋರ ಅಪರಾಧ ಪ್ರಕರಣಗಳು ಹಾಗೂ 05 ಬೈಕ್ ಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿರುತ್ತವೆ.  ಆರೋಪಿತರಲ್ಲಿ ಎ1 ಆರೋಪಿಯನ್ನು ಹೊರತು ಪಡಿಸಿ ಇನ್ನುಳಿದ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top