Connect with us

Dvgsuddi Kannada | online news portal | Kannada news online

ದಾವಣಗೆರೆ: ಮಹಿಳೆ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 2.80 ಲಕ್ಷ ಮೊತ್ತದ ಚಿನ್ನಾಭರಣ ವಶ

IMG 20250317 WA0003

ದಾವಣಗೆರೆ

ದಾವಣಗೆರೆ: ಮಹಿಳೆ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 2.80 ಲಕ್ಷ ಮೊತ್ತದ ಚಿನ್ನಾಭರಣ ವಶ

ದಾವಣಗೆರೆ: ಮಹಿಳೆ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 2.80 ಲಕ್ಷ ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ ಅಡಿಕೆ ಧಾರಣೆ: ಮಾ.17ರ ದರ ಎಷ್ಟಿದೆ..?

ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದ ಸುಮಂಗಳಮ್ಮ (62) ಗೃಹಿಣಿ ಇವರು ಮಾ. 12‌ರಂದು ಬೆಳಗ್ಗೆ 06-30 ಗಂಟೆ ಸಮಯದಲ್ಲಿ ತಮ್ಮ ಮನೆಯಿಂದ ಕಳವೂರು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ ಇವರ ಕೊರಳಿದ್ದ 50 ಗ್ರಾಂ ನ ಬಂಗಾರದ ಮಾಂಗಲ್ಯ ಸರವನ್ನು ಯಾರೋ ಮೂವರು ಬೈಕ್ ನಲ್ಲಿ ಬಂದು ಕಿತ್ತುಕೊಂಡು ಹೋಗಿರುವ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದರು.

ಉತ್ತರ ಪ್ರದೇಶದಿಂದ ಬ್ಯಾಂಕ್ ದರೋಡೆಗೆ ಬಂದಿದ್ದರನ್ನು ಸಿನಿಮಾ ಸ್ಟೈಲ್ ನಲ್ಲಿ ಚೇಜ್ ಮಾಡಿ ಗುಂಡು ಹಾರಿಸಿ ಸೆರೆಹಿಡಿದ ದಾವಣಗೆರೆ ಪೊಲೀಸರು…!!

ಎಎಸ್ಪಿಗಳಾದ ವಿಜಯ ಕುಮಾರ್. ಎಂ. ಸಂತೋಷ್, ಜಿ.ಮಂಜುನಾಥ , ಡಿವೈಎಸ್ಪಿ ಬಸವರಾಜ್.ಬಿ.ಎಸ್ ಮಾರ್ಗದರ್ಶನದಲ್ಲಿ ಮತ್ತು ಮಾಯಕೊಂಡ ಸಿಪಿಐ ನಾಗರಾಜ ಡಿ. ಸಾರಥ್ಯದಲ್ಲಿ ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್‌ಐ ಅಜಯ.ಎಸ್.ಬಿ ಮತ್ತು ಹದಡಿ ಪೊಲೀಸ್ ಠಾಣೆಯ ಪಿಎಸ್ ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.

ಈ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 1) ರವಿ ಕಿರಣ (27) ಆಟೋ ಡ್ರೈವರ್, ವಾಸ: ರಾಮನಗರ, ದಾವಣಗೆರೆ ಈತನನ್ನು ‌ಬಂಧನ ಮಾಡಿ ವಿಚಾರಣೆ ನಡೆಸಿದಾಗ, ಸದರಿ ವ್ಯಕ್ತಿಯು ಈ ಮೇಲ್ಕಂಡ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿತನಿಂದ ಒಟ್ಟು 50 ಗ್ರಾಂ ತೂಕದ 2 ಲಕ್ಷ ರೂ ಮೊತ್ತದ ಮಾಂಗಲ್ಯ ಸರವನ್ನು ಮತ್ತು ಕೃತ್ಯಕ್ಕೆ ಬಳಸಿದ ಸುಮಾರು 80,000/- ರೂ ಮೌಲ್ಯದ ಹೊಂಡಾ ಶೈನ್ ಬೈಕ್ ‌ವಶಕ್ಕೆ ಪಡಿಸಿಕೊಂಡಿದ್ದು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಆರೋಪಿತನೊಂದಿಗೆ ಪ್ರಕರಣದಲ್ಲಿ ಸಹಚರರಾದ 2) ರಮೇಶ (47) ಕೂಲಿ ಕೆಲಸ, ವಾಸ:ತಡಗ ಕಾಲೋನಿ, ಶಿವನಿ, ಅಜ್ಜಂಪುರ ತಾಲ್ಲೋಕು, ಚಿಕ್ಕಮಗಳೂರು ಜಿಲ್ಲೆ 3) ಮನು @ ಮನೋಜ (23), ಹಮಾಲಿ ಕೆಲಸ, ಅಜ್ಜಂಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರುಗಳು ನಾಪತ್ತೆಯಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ.

ಆರೋಪಿ ಹಿನ್ನೆಲೆ: ಮಂಗಳೂರಿನಲ್ಲಿ 05 ಸರಗಳ್ಳತನ ಪ್ರಕರಣಗಳಲ್ಲಿ, ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 01 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಪತ್ತೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಶಿಸಿದ್ದಾರೆ‌.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top