ದಾವಣಗೆರೆ: ತಡ ರಾತ್ರಿಯವರೆಗೂ ಪಾರ್ಟಿ ಆಯೋಜನೆ ಮಾಡಿದ ಮಿಟ್ಲಕಟ್ಟೆ ಗ್ರಾಮದ ಹೋಟೆಲ್ ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲೆಯ ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿರುವ ದಿ ಸ್ಟೇಜ್ ಹೋಟೆಲ್ ಮೇಲೆ ದಾಳಿ ನಡೆದಿದೆ.
ತಡ ರಾತ್ರಿ ವರೆಗೂ ಯುವಕ-ಯುವತಿಯರು ಡಿಜೆ ಸೌಂಡ್ ಹಾಕಿ ಕುಣಿಯುತಿದ್ದರು. ಇದರಿಂದ ಗ್ರಾಮದ ಸಾರ್ವಜನಿಕರು ತಡ ರಾತ್ರಿ ಕೆಆರ್ಎಸ್ ಪಾರ್ಟಿಯ ಕಾರ್ಯಕರ್ತರೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೋಟೆಲ್ ಮೇಲೆ ದಾಳಿಯಾಗುತಿದ್ದಂತೆ ಯುವಕ ಯುವತಿಯರು ಅಲ್ಲಿಂದ ಪರಾರಿಯಾಗಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ 11 ಗಂಟೆಯೊಳಗೆ ಹೋಟೆಲ್ ಬಂದ್ ಮಾಡಬೇಕೆಂಬ ನಿಯಮವಿದೆ. ಈ ಆದೇಶವನ್ನು ದಾವಣಗೆರೆ ಹೊರ ವಲಯದ ಹೋಟೆಲ್ ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.



