ದಾವಣಗೆರೆ: ದಾವಣಗೆರೆ- ಚನ್ನಗಿರಿ ಮಾರ್ಗದ ಕೈದಾಳ್ ಗ್ರಾಮದ ಬಳಿ ಬೆಳಗಿನಜಾವ ಕಳ್ಳತನಕ್ಕೆ ಹೊಂಚು ಹಾಕಿ ಕೂತಿದ್ದ ಭದ್ರಾವತಿಯ ಐವರಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಆರೋಪಿಯಿಂದ 16 ಲಕ್ಷ ಮೌಲ್ಯದ ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ.
ಆ.18 ರಂದು ಬೆಳಗಿನಜಾವ ಗಸ್ತಿನಲ್ಲಿದ್ದ ಹದಡಿ ಪೊಲೀಸ್ ಠಾಣೆ ಸಿಬ್ಬಂದಿ ದಾವಣಗೆರೆ- ಚನ್ನಗಿರಿ ಮಾರ್ಗದ ಕೈದಾಳ್ ಗ್ರಾಮದ ಬಳಿ ಅನುಮಾಸ್ಪದವಾಗಿ ನಿಲ್ಲಿಸಿದ್ದ ಕಾರೊಂದನ್ನು ಪರಿಶೀಲನೆ ನಡೆಸಿದ್ದಾಗ ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಪೊಲೀಸರನ್ನು ನೋಡಿದ ತಕ್ಷಣ ಓಡಿ ಹೋಗಿದ್ದಾರೆ. ಭದ್ರಾವತಿ ಮೂಲದ 23 ವರ್ಷದ ಸಾಧಿಕ್ ವುಲ್ಲಾ ಎಂಬ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ್ದಾಗ ಜಿಲ್ಲೆಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣ, ಮಾಯಕೊಂಡ 1, ಬಿಳಿಚೋಡು ಪೊಲೀಸ್ ಠಾಣೆಯ 2 ಪ್ರಕರಣ ಸೇರಿ ಒಟ್ಟು 5 ಪ್ರಕರಣಕ್ಕೆ ಸಂಬಂಧಿಸಿದಂತೆ 3,02000 ನಗದು, ಒಂದು ಅಶೋಕ್ ಲೈಲ್ಯಾಂಡ್ ವಾಹನ, ಇನೋವಾ ಕಾರು, ಲಾಂಗ್ , ಮಚ್ಚು, ಕಾರದ ಪುಡಿ, ಹಗ್ಗದ ತುಂಡು, ದೊಣ್ಣೆ, ಕಬ್ಬಿಣ ರಾಡು ಸೇರಿ ಒಟ್ಟು 16,00,000 ಮೌಲ್ಯದ ಸ್ವತ್ತು ವಶಕ್ಕೆಪಡೆಯಲಾಗಿದೆ.
ಈ ಪ್ರಕರಣ ಭೇದಿಸುವಲ್ಲಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಎಎಸ್ ಪಿ ಕನ್ನಿಕಾ ಸಕ್ರಿವಾಲ್ ಮಾರ್ಗದರ್ಶನದಲ್ಲಿ ಮಾಯಕೊಂಡ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಎನ್. ತಿಪ್ಪಣ್ಣ ನೇತೃತ್ವದಲ್ಲಿ ಹದಡಿ ಪೊಲೀಸ್ ಠಾಣೆ ಪಿಎಸ್ ಐ ಸಂಜೀವ್ ಕುಮಾರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ನಡೆದಿದೆ. ಈ ಕಾರ್ಯಾಚರಣೆಗೆ ಎಸ್ ಪಿ ರಿಷ್ಯಂತ್, ಹೆಚ್ಚುವರಿ ಎಸ್ ಪಿ ಆರ್ . ಬಿ. ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



