Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೊಂದು ಖೋಟಾ ನೋಟು ಪ್ರಕರಣ ಪತ್ತೆ; ಹೊಟ್ಟಿಗೇನಹಳ್ಳಿಯಲ್ಲಿ 3.23 ಲಕ್ಷ ಖೋಟಾ ನೋಟು ಪತ್ತೆ

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೊಂದು ಖೋಟಾ ನೋಟು ಪ್ರಕರಣ ಪತ್ತೆ; ಹೊಟ್ಟಿಗೇನಹಳ್ಳಿಯಲ್ಲಿ 3.23 ಲಕ್ಷ ಖೋಟಾ ನೋಟು ಪತ್ತೆ

ದಾವಣಗೆರೆ: ಕಳೆದ ವಾರವಷ್ಟೇ ದಾವಣಗೆರೆ ನಗರದಲ್ಲಿ ಖೋಟಾ ನೋಟು ಪ್ರಕರಣವೊಂದು ಪತ್ತೆಯಾಗಿತ್ತು. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಟ್ಟಿಗೇನಹಳ್ಳಿ ಗ್ರಾಮದಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ಖೋಟಾ ನೋಟು ಪತ್ತೆಯಾಗಿವೆ.

ಹೊಟ್ಟಿಗೇನಹಳ್ಳಿ ಗ್ರಾಮದಲ್ಲಿ ಕುಬೇರಪ್ಪ ಎಂಬುವವರ ವಾಸದ ಮನೆ ಹಾಗೂ ಕೊಟ್ಟಿಗೆ ಮನೆಯಲ್ಲಿ ಖೋಟಾ ನೋಟುಗಳು ಸಿಕ್ಕಿವೆ. ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಮನೆಯ ಮೇಲೆ ದಾಳಿ ಮಾಡಿ 500 ರೂಪಾಯಿ ಮುಖಬೆಲೆಯ 646 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಖೋಟಾ ನೋಟುಗಳ ಒಟ್ಟು ಮೌಲ್ಯ 3,23,000 ರೂ. ಗಳಾಗಿದ್ದು, ಈ ನೋಟುಗಳಲ್ಲಿ RBI ಎನ್ನುವ ಗ್ರೀನ್ ಲೈನ್ ಇದ್ದು, ನಿಜವಾದ ನೋಟಿನಲ್ಲಿ ಈ ಲೈನ್ ಇರದ ಕಾರಣ ಇದು ನಕಲಿ ನೋಟುಗಳು ಎಂದು ಕಂಡು ಬಂದಿದೆ.

ಈ ಖೋಟಾ ನೋಟುಗಳು ಪತ್ತೆಯಾದ ಸ್ಥಳದಲ್ಲಿ ವಾಸವಾಗಿದ್ದ ಕುಬೇರಪ್ಪ ಎಂಬಾತ ಹೊಟ್ಟಿಗೇನಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಗ್ರಾಮದ ತೋಟಗಳಲ್ಲಿ ಕೆಲಸ ಮಾಡುತ್ತಿರುತ್ತಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಕುಬೇರಪ್ಪ ನಾಪತ್ತೆಯಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ. ಇತ್ತೇಚೆಗೆ ದಾವಣಗೆರೆಯ ಯಲ್ಲಮ್ಮ ನಗರದಲ್ಲಿ 1.20 ಲಕ್ಷ ಬೆಲೆಯ ಖೋಟಾ ನೋಟು ಪತ್ತೆಯಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಅವರು ಕಾರ್ಯಾಚರಣೆ ಮಾಡಿದ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top