Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿ ಇಂದು ಬರೋಬ್ಬರಿ 450 ಕೊರೊನಾ ಪಾಸಿಟಿವ್; 4 ಸಾವು, 107 ಡಿಸ್ಚಾರ್ಜ್

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿ ಇಂದು ಬರೋಬ್ಬರಿ 450 ಕೊರೊನಾ ಪಾಸಿಟಿವ್; 4 ಸಾವು, 107 ಡಿಸ್ಚಾರ್ಜ್

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿತ್ತು. ಆದರೆ, ಇಂದು  ಒಂದೇ ದಿನ ಬರೋಬ್ಬರಿ 450 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 17,987ಕ್ಕೆ ಏರಿಕೆಯಾಗಿದೆ.

ಇಂದು ಕೊರೊನಾದಿಂದ 107  ಮಂದಿ ಗುಣಮುಖರಾಗಿ  ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು 15,583 ಮಂದಿ ಗುಣಮುಖರಾಗಿದ್ದಾರೆ. ಇಂದು  ಕೊರೊನಾದಿಂದ 4 ಮಂದಿ ಮೃತಪಟ್ಟಿದ್ದು,  ಜಿಲ್ಲೆಯಲ್ಲಿ ಇದುವರೆಗೆ 247 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು 2157 ಸಕ್ರಿಯ ಪ್ರಕರಣಗಳಿವೆ.

ಇಂದು ಪತ್ತೆಯಾದ ಪ್ರಕರಣಗಳಲ್ಲಿ ದಾವಣಗೆರೆಯಲ್ಲಿ178, ಹರಿಹರ 72, ಜಗಳೂರು 56, ಚನ್ನಗಿರಿ 65, ಹೊನ್ನಾಳಿ 76 ಹಾಗೂ ಇತರೆ ಜಿಲ್ಲೆಯಿಂದ 03 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top