ದಾವಣಗೆರೆ: ದಾವಣಗೆರೆ ಚಿತ್ರಕಲಾ ಪರಿಷತ್ತಿನಿಂದ ಇದೇ ಮೊಟ್ಟ ಮೊದಲ ಬಾರಿಗೆ ಏ. 17 ರಂದು ನಗರದಲ್ಲಿ ‘ದಾವಣಗೆರೆ ಚಿತ್ರಸಂತೆ’ ನಡೆಯಲಿದೆ. ಈ ಚಿತ್ರಸಂತೆ ಕಲಾವಿದರಿಗೆ ಮತ್ತು ಕಲಾಭಿಮಾನಿಗಳಿಗೆ ಸಂಭ್ರಮದ ಕ್ಷಣವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿದ ದಾವಣಗೆರೆ ಚಿತ್ರಸಂತೆ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್, ದೇವನಗರಿ ದಾವಣಗೆರೆಯಲ್ಲಿ ಮೊದಲ ಬಾರಿಗೆ ಚಿತ್ರಸಂತೆ ನಡೆಯುತ್ತಿದೆ. ಈ ಮೂಲಕ ಕಲಾವಿದರು ಮತ್ತು ಕಲಾಭಿಮಾನಿಗಳು ಒಂದು ಕಡೆ ಸೇರಲಿದ್ದಾರೆ. ವೈವಿಧ್ಯಮಯ ಕಲಾ ಕೃತಿಗಳು ಜನಮನ ಸೆಳೆಯಲಿವೆ. ಕಲಾವಿದರು ಬಿಡಿಸಿದ ಚಿತ್ರಗಳು ಮತ್ತು ಕ್ರಾಫ್ಟ್ ಗಳನ್ನು ಮಾರಾಟ ಮಾಡಲು ಈ ಚಿತ್ರಸಂತೆ ವೇದಿಕೆ ಕಲ್ಪಿಸಿಕೊಡಲಿದೆ ಎಂದರು.
ಏ.17 ರಂದು ಬೆಂಗಳೂರು ಚಿತ್ರಕಲೆ ಮಾದರಿಯಲ್ಲಿಯೇ ಎವಿಕೆ ಕಾಲೇಜಿನ ರಸ್ತೆಯಲ್ಲಿ ಸಂಪೂರ್ಣ ಕಲೆ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಪ್ರದರ್ಶನ ನಡೆಯಲಿದೆ. ಚಿತ್ರಸಂತೆ ಹಿನ್ನೆಲೆ ಕೆಎಸ್ ಆರ್ ಟಿಸಿ ತಾತ್ಕಾಲಿಕ ಬಸ್ ನಿಲ್ದಾಣದಿಂದ ಬಿಎಸ್ ಸಿ ಬಟ್ಟೆ ಅಂಗಡಿ ವರೆಗೆ ರಸ್ತೆ ಕ್ಲೋಸ್ ಮಾಡಲಾಗುವುದು ಎಂದರು.
ವಿವಿಧ ರಾಜ್ಯ ಸೇರಿ 250 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. 25 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಕಲಾವಿದರಿಗೆ ನೋಂದಣಿ ಶುಲ್ಕವಾಗಿ 500 ರೂಪಾಯಿನಿಗದಿ ಮಾಡಲಾಗಿದೆ. ಹೊರ ರಾಜ್ಯದವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆ ಚಿತ್ರಸಂತೆಗೆ ಸರ್ಕಾರ ಅನುದಾನ ನೀಡಿಲ್ಲ. ಪರಿಷತ್ತು ಸ್ವಂತ ಖರ್ಚಿನಲ್ಲಿಯೇ ಚಿತ್ರಸಂತೆ ಆಯೋಜಿಸಿದೆ ಪ್ರದರ್ಶನ ನಡೆಯಲಿದೆ.
ಸಾಮಾನ್ಯ ಮತ್ತು ವಿದ್ಯಾರ್ಥಿ ವಿಭಾಗದಲ್ಲಿ ಮೂರು ಸ್ಥಾನಗಳಿಗೆ ಕ್ರಮವಾಗಿ 5, 3 ಹಾಗೂ 1 ಸಾವಿರ ನೀಡಲಾಗುವುದು. ಸಂದರವಾಗಿ ಪ್ರದರ್ಶನ ಮಾಡಿದ ಮೂರು ಮಳಿಗೆಗಳಿಗೆ ಬಹುಮಾನ ನೀಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ 9844262279,9448404419 ಸಂಪರ್ಕಿಸಿ.



