ದಾವಣಗೆರೆ: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಸಹೋದರಿಯರು ಸೇರಿ ಮೂವರು ಮಹಿಳೆಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದಘಟನೆ ಇಂದು (ಮಾ17) ನಡೆದಿದೆ.
ದಾವಣಗೆರೆ: ಮಹಿಳೆ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 2.80 ಲಕ್ಷ ಮೊತ್ತದ ಚಿನ್ನಾಭರಣ ವಶ
ಜಿಲ್ಲೆಯ ಚನ್ನಗಿರಿ ಪಟ್ಟಣ ಸಮೀಪ ಇರುವ ಲಕ್ಷ್ಮಿಸಾಗರ-ದಿಗ್ಗೇನಹಳ್ಳಿ ಗ್ರಾಮದ ಮಧ್ಯೆ ಹೊಸಕೆರೆಯಲ್ಲಿ ಈ ಘಟನೆ ನಡೆದಿದೆ. ಬಟ್ಟೆ ತೊಳೆಯಲು ಹೋಗಿದ್ದ ದೀಪಾರಾಣಿ(30), ದಿವ್ಯಾ(26) ಮತ್ತು ಚಂದನಾ(19) ಮೃತಪಟ್ಟರು. ದಿವ್ಯಾ ಮತ್ತು ಚಂದನಾ ಸಹೋದರಿಯರು. ದೀಪಾರಾಣಿ ಪಕ್ಕದ ಮನೆಯವರಾಗಿದ್ದರು.
ದಾವಣಗೆರೆ ಅಡಿಕೆ ಧಾರಣೆ: ಮಾ.17ರ ದರ ಎಷ್ಟಿದೆ..?
ಬಟ್ಟೆ ತೊಳೆಯುವಾಗ ಚಂದನಾ ಈಜಲು ಕೆರೆಗೆ ಇಳಿದಿದ್ದಾರೆ. ಆಗ ಕೆಸರಿನಲ್ಲಿ ಸಿಲುಕಿದ ಚಂದನಾಳನ್ನು ಕಾಪಾಡಲು ನೀರಿಗೆ ಅಕ್ಕ ದಿವ್ಯಾ ಪ್ರಯತ್ನಿಸಿದ್ದು, ದಿವ್ಯಾ ಸಹ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಇಬ್ಬರನ್ನು ರಕ್ಷಿಸಲು ಮುಂದಾದ ದೀಪಾರಾಣಿಯೂ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ದೀಪಾರಾಣಿ ಮತ್ತು ದಿವ್ಯಾ ಅವರಿಗೆ ವಿವಾಹವಾಗಿದೆ.
ಚನ್ನಗಿರಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೂವರ ಶವಗಳನ್ನು ಹೊರ ತೆಗೆದಿದ್ದಾರೆ. ಮೃತರ ಕುಟುಂಬದ ರೋಧನ ಮುಗಿಲು ಮುಟ್ಟಿದೆ.ತಹಶೀಲ್ದಾರ್ ಎನ್.ಜೆ. ನಾಗರಾಜ್, ವೃತ್ತ ನಿರೀಕ್ಷಕ ಕೆ. ರವೀಶ್ ಸ್ಥಳ ಪರಿಶೀಲನೆ ನಡೆಸಿದರು.



