ದಾವಣಗೆರೆ: ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಅಹಿಂದ ವರ್ಗಕ್ಕೆ ಟಿಕೆಟ್ ನೀಡಬೇಕು. ಒಂದು ವೇಳೆ ಕುಟುಂಬ ರಾಜಕಾರಣಕ್ಕೆ ಮಣಿ ಹಾಕಿ ಟಿಕೆಟ್ ನೀಡಿದರೆ ಸ್ವಾಭಿಮಾನಿ ಬಳಗದಿಂದ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲಾಗುವುದು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಎಳ್ಳು-ಬೆಲ್ಲ ಸವಿದು ಒಳ್ಳೆಯ ಮಾತನಾಡಿ: ತರಳಬಾಳು ಶ್ರೀ ಸಂಕ್ರಾಂತಿ ಶುಭ ಸಂದೇಶ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಹಿಂದ ವರ್ಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹೀಗಾಗಿ ಈ ಬಾರಿಯ ಉಪಚುನಾವಣೆಯಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ದಲಿತ) ವರ್ಗಕ್ಕೆ ನೀಡಬೇಕು ಎಂದು ಆಗ್ರಹುಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಶೇಕಡಾ 85ರಷ್ಟು ಮತದಾರರಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ಅಹಿಂದ ಸಮುದಾಯಕ್ಕೆ ಟಿಕೆಟ್ ನೀಡದ್ರೆ ಸ್ವಾಭಿಮಾನಿ ಬಳಗದಿಂದ ಬಾಹ್ಯ ಬೆಂಬಲ ನೀಡುತ್ತೇವೆ. ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸ್ವಾಗತಿಸುತ್ತೇನೆ. ಮತ್ತೆ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ಸಹಿಸಲ್ಲ.ಅಧಿಕಾರ ವಿಕೇಂದ್ರೀಕೃವಾಗಬೇಕು. ಕೇವಲ ಒಂದೇ ಕುಟುಂಬಕ್ಕೆ ಸೀಮಿತ ಆಗಬಾರದು ಎಂದರು.
ದಾವಣಗೆರೆ: ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಳ್ ಸಾವು; ಡಿಎನ್ಎ ಪರೀಕ್ಷೆ ಸಿದ್ಧತೆ
ಕೆಲವೊಂದು ಕ್ಷೇತ್ರಗಳು ಮಿನಿ ರಿಪಬ್ಲಿಕ್ ಆಗಿವೆ. ಒಂದು ಕುಟುಂಬದ ನಿಯಂತ್ರಣ ನಡೆಯುತ್ತಿದೆ. ದುರಹಂಕಾರ ಮಿತಿ ಮೀರಿದೆ. ಇದಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರವೂ ಹೊರತಾಗಿಲ್ಲ ಎಂದರು.



