Connect with us

Dvgsuddi Kannada | online news portal | Kannada news online

ದಾವಣಗೆರೆ; ಜಿಲ್ಲೆಯಲ್ಲಿ 14.42 ಲಕ್ಷ ಮತದಾರರು; 38,209 ಹೊಸ ಸೇರ್ಪಡೆ; ಚುನಾವಣಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ

ದಾವಣಗೆರೆ

ದಾವಣಗೆರೆ; ಜಿಲ್ಲೆಯಲ್ಲಿ 14.42 ಲಕ್ಷ ಮತದಾರರು; 38,209 ಹೊಸ ಸೇರ್ಪಡೆ; ಚುನಾವಣಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ

ದಾವಣಗೆರೆ; ವಿಧಾನಸಭೆ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿ೦ದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಅಂತಿಮವಾಗಿ ಜಿಲ್ಲೆಯಲ್ಲಿ 14,42,553 ಮತದಾರರಿದ್ದು, 1,685 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 18-19 ವಯೋ ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿದ್ದಾರೆ. ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅಂದರೆ 5,649, ಹೊನ್ನಾಳಿ ಕ್ಷೇತ್ರದಲ್ಲಿ 5634 ಯುವ ಮತದಾರರು ಹೆಸರು‌ ನೋಂದಾಯಿಸಿದ್ದಾರೆ. ಕಳೆದ ಜ.6 ರಿಂದ ಏ.20 ವರೆಗೆ ನಡೆದ ಮತಗದಾರರ ಪಟ್ಟಿ ಪರಿಷ್ಕರಣೆಯಲ್ಲಿ 38209 ಜನರನ್ನು ಹೊಸದಾಗಿಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 20294 ಮಹಿಳೆಯರು, 17710 ಪುರುಷರು, 7 ಜನ ಇತರೆಮತದಾರರು ಸೇರಿದ್ದಾರೆ ಎಂದರು.

ಇನ್ನು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು ಹೊ೦ದಿದ ಕ್ಷೇತ್ರವಾಗಿದ್ದು, 241278 ಜನ ಮತದಾರರಾಗಿದ್ದಾರೆ. ಮಾಯಕೊಂಡದಲ್ಲಿ ಅತಿ ಕಡಿಮೆ ಅಂದರೆ 191421 ಮತದಾರರು ಇದ್ದಾರೆ.ಚುನಾವಣಾ ದಿನದಂದು ಕರ್ತವ್ಯ ನಿರ್ವಹಿಸುವ ಚುನಾವಣಾ ಸಿಬ್ಬ೦ದಿ ಸೇರಿ ಪೊಲೀಸ್ ಸಿಬ್ಬಂದಿಗಳಿಗೆ‌ನಮೂನೆ-12 ವಿತರಣೆಗೆ 9935 ಸಿಬ್ಬಂದಿಗೆ ನೀಡಲು ದಾವಣಗೆರೆಯಲ್ಲಿ ಚುನಾವಣೆ ಪೂರ್ವ ತಯಾರಿ ನಡೆದಿದೆ.ಇದುವರೆಗೆ 7973 ಸಿಬ್ಬಂದಿಯವರು ನಮೂನೆ-12 ಭರ್ತಿ ಮಾಡಿ ನೀಡಿರುವರು. ಇವರಿಗೆ ಅಂಚೆ ಬ್ಯಾಲೆಟ್ ನೀಡಲು ಸಿದ್ಧತೆ
ಮಾಡಿಕೊಳ್ಳಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳ ಹಂಚಿಕೆ : ಜಿಲ್ಲೆಯಲ್ಲಿ‌1,685 ಮತಗಟ್ಟೆಗಳಿದ್ದು1685 ಬ್ಯಾಲೆಟ್ ಯುನಿಟ್,1685 ಕಂಟ್ರೋಲ್ ಯುನಿಟ್, 1685 ವಿವಿಪ್ಯಾಟ್ ಅವಶ್ಯವಿರುತ್ತದೆ. ಇಷ್ಟು ಸಂಖ್ಯೆ ಗಳ ಜೊತೆಗೆ ಶೇ 20ರಷ್ಟು ಹೆಚ್ಚುವರಿಯಾಗಿ 339 ಬ್ಯಾಲೆಟ್ ಮತ್ತು‌ಕಂಟ್ರೋಲ್ ಯುನಿಟ್, ಶೇ 30 ರಷ್ಟು ವಿವಿ ಪ್ಯಾಟ್‌ 509 ಹೆಚ್ಚುವರಿ ಸೇರಿ ಒಟ್ಟು 2029 ಬ್ಯಾಲೆಟ್‌ ಯುನಿಟ್, 2029 ಕಂಟ್ರೋಲ್ ಯುನಿಟ್, 2194 ವಿವಿಪ್ಯಾಟ್‌ ಹಂಚಿಕೆ ಮಾಡಲಾಗಿದೆ. ಮತಯಂತ್ರಗಳ ಎರಡನೇ ಹಂತದ ವೀಕ್ಷಣೆ ಏ.30 ರಂದು ಅಭ್ಯರ್ಥಿಗಳು, ಚುನಾವಣಾಧಿಕಾರಿಗಳ ಹಾಗೂವೀಕ್ಷಕರ ಸಮ್ಮುಖದಲ್ಲಿ ನಡೆಯಲಿದೆ.ಮತಪತ್ರಗಳನ್ನು ಯ೦ತ್ರಗಳಿಗೆ ಜೋಡಿಸುವ ಕೆಲಸ ಮಾಡಲಾಗುತ್ತದೆ ಎಂದರು.

ವಿಶೇಷ ಮತಗಟ್ಟೆಗಳ ಸ್ಥಾಪನೆ: ಜಿಲ್ಲೆಯ ಪ್ರತಿ‌ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 7 ಸಖಿ ಮತಗಟ್ಟೆ, 7 ವಿಶೇಷಚೇತನರ ಮತಗಟ್ಟೆ ಯುವ ಮತದಾರರ ಮತಗಟ್ಟೆಜಿಲ್ಲೆಯಲ್ಲಿ ಸಾಂಪ್ರದಾಯಿಕ ಮತಗಟ್ಟೆ 1, ವಿಷಯಾಧಾರಿತ 2 ಮತಗಟ್ಟೆ ಸ್ಥಾಪಿಸಲಿದ್ದು ಇವು ಮತಗಟ್ಟೆ ವಿಶೇಷವಾಗಿರುತ್ತವೆ ಎಂದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top