Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಕಳೆದ ಮೂರ್ನಾಲ್ಕು ದಿನದಿಂದ ಏರಿಕೆ ಹಾದಿಗೆ ಮರಳಿದ ಮಾರುಕಟ್ಟೆ..!

ದಾವಣಗೆರೆ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಕಳೆದ ಮೂರ್ನಾಲ್ಕು ದಿನದಿಂದ ಏರಿಕೆ ಹಾದಿಗೆ ಮರಳಿದ ಮಾರುಕಟ್ಟೆ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಮತ್ತೆ ಚೇತರಿಕೆ ಕಂಡಿದೆ. ಮೂರ್ನಾಲ್ಕು ದಿನದಿಂದ ಅಡಿಕೆ ಮಾರುಕಟ್ಟೆ ಏರಿಕೆ ಹಾದಿ ಮರಳಿದೆ. ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯ ಇಂದು (ಫೆ.24) ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 46,299 ರೂ.ಗೆ ಮಾರಾಟವಾಗಿದೆ. ಈ ಮೂಲಕ ಹಿಂದಿನ ಮೂರ್ನಾಲ್ಕು ದಿನದ ಮಾರುಕಟ್ಟೆಗೆ ಹೊಲಿಸಿದ್ರೆ ಬೆಲೆಯಲ್ಲಿ 500ರೂ.ಗಳಷ್ಟು ಏರಿಕೆ ಆಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 46299 ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಕ್ವಿಂಟಾಲ್ ಗೆ ಗರಿಷ್ಠ 46,039 ರೂ. ದಾಖಲಾಗಿತ್ತು. 2nd ಬೆಟ್ಟೆ ಅಡಿಕೆ ಗರಿಷ್ಠ 35,705 ಬೆಲೆಗೆ ಮಾರಾಟವಾಗಿದೆ.

ಫೆ.24 ರಂದು ಉತ್ತಮ ರಾಶಿಯ ಕನಿಷ್ಠ ಬೆಲೆ‌ 42,729 ಆಗಿದ್ದು, ಗರಿಷ್ಠ ಬೆಲೆ 46299 ಹಾಗೂ ಸರಾಸರಿ ಬೆಲೆ 45,50 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ ಬೆಲೆ 27129, ಗರಿಷ್ಠ ಬೆಲೆ 35,705 ಹಾಗೂ ಸರಾಸರಿ ಬೆಲೆ 33,735 ಆಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top