Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; 49 ಸಾವಿರ ಗಡಿಯತ್ತ ಅಡಿಕೆ ದರ…!

ಚನ್ನಗಿರಿ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; 49 ಸಾವಿರ ಗಡಿಯತ್ತ ಅಡಿಕೆ ದರ…!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಮಾರ್ಚ್ ಅಂತ್ಯದಲ್ಲಿ 45 ಸಾವಿರಕ್ಕೆ ಕುಸಿದಿದ್ದ ದರ, ಏಪ್ರಿಲ್ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಬೆಲೆ ಏರಿಕೆಯತ್ತ‌ ಮುಖ ಮಾಡಿತ್ತು. ಇದೀಗ ಇಂದು (ಮೇ 22) ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 48,851 ರೂ.ಗೆ ಮಾರಾಟವಾಗಿದೆ. ನಿನ್ನೆಯ ಮಾರುಕಟ್ಟೆಗೆ ಹೋಲಿಸಿದರೆ ಇಂದು 250 ರೂಪಾಯಿಯಷ್ಟು ಚೇತರಿಕೆ ಕಂಡಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ಅಡಿಕೆ ವಹಿವಾಟಿನಲ್ಲಿ ಮೇ 22ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 47,689 ಗರಿಷ್ಠ ಬೆಲೆ 48,851 ಹಾಗೂ ಸರಾಸರಿ ಬೆಲೆ 48,382 ರೂ. ಆಗಿದೆ. ಇದೇ ವೇಳೆ ಬೆಟ್ಟೆ ಅಡಿಕೆ ಗರಿಷ್ಠ 36,543ರೂ.ಗೆ ಮಾರಾಟವಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

Advertisement

ದಾವಣಗೆರೆ

Advertisement
To Top