Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ದರದಲ್ಲಿ ಮತ್ತೆ ಏರಿಕೆ; 49 ಸಾವಿರ ಗಡಿ ದಾಟಿದ ಬೆಲೆ

ಚನ್ನಗಿರಿ

ದಾವಣಗೆರೆ: ಅಡಿಕೆ ದರದಲ್ಲಿ ಮತ್ತೆ ಏರಿಕೆ; 49 ಸಾವಿರ ಗಡಿ ದಾಟಿದ ಬೆಲೆ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಏಪ್ರಿಲ್ ತಿಂಗಳ ಕೊನೆಯಲ್ಲಿ ಕುಸಿತ ಕಂಡಿತ್ತು.‌ ಇದೀಗ ಮೇ ತಿಂಗಳ ಮೊದಲ ವಾರದಲ್ಲಿ ಚೇತರಿಕೆ ಹಾದಿಗೆ ಮರಳಿದ್ದು, ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಮಾರ್ಚ್ ಅಂತ್ಯದಲ್ಲಿ 45 ಸಾವಿರಕ್ಕೆ ಕುಸಿದಿದ್ದ ದರ, ಏಪ್ರಿಲ್ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಬೆಲೆ ಏರಿಕೆಯತ್ತ‌ ಮುಖ ಮಾಡಿತ್ತು. ಗರಿಷ್ಠ 50 ಸಾವಿರ ಗಡಿ ತಲುಪಿತ್ತು. ಏಪ್ರಿಲ್ ಕೊನೆಯ ವಾರ ಕುಸಿತ ರೈತರಲ್ಲಿ ಆತಂಕ ಉಂಟು ಮಾಡಿತ್ತು. ಇದೀಗ ಮತ್ತೆ ಚೇತರಿಕೆ ಕಂಡಿದೆ. ಪ್ರತಿ ಕ್ವಿಂಟಾಲ್ ಬೆಲೆ ಇಂದು (ಮೇ 03) ಗರಿಷ್ಠ ಬೆಲೆ 49,099 ಮರಾಟವಾಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ವಹಿವಾಟಿನಲ್ಲಿ ಮೇ 03 ರಂದು ಪ್ರತಿ ಕ್ವಿಂಟಾಲ್ ಕನಿಷ್ಠ ಬೆಲೆ 45,789 ಗರಿಷ್ಠ ಬೆಲೆ 49,099 ಹಾಗೂ ಸರಾಸರಿ ಬೆಲೆ 48,479 ರೂ. ಆಗಿದೆ. ಇದೇ ವೇಳೆ ಬೆಟ್ಟೆ ಅಡಿಕೆ ಗರಿಷ್ಠ 35,629 ರೂ.ಗೆ ಮಾರಾಟವಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

Advertisement

ದಾವಣಗೆರೆ

Advertisement
To Top