ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಚೇತರಿಕೆ ಲಕ್ಷಣ ಕಾಣುತ್ತಿದ್ದು, ಜಿಲ್ಲೆಯ ಇವತ್ತಿನ(ಜ.18) ಮಾರುಕಟ್ಟೆ ಬೆಲೆಯಲ್ಲಿ ಗರಿಷ್ಠ 46,599ಗೆ ಮಾರಾಟವಾಗಿದೆ. 2nd ಬೆಟ್ಟೆ ಅಡಿಕೆ ಬೆಲೆ ನಿನ್ನೆಗೆ ಹೊಲಿಸಿದೆ 3 ಸಾವಿರ ಏರಿಕೆ ಕಂಡಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಕ್ವಿಂಟಾಲ್ ಗೆ ದರ 46,599 ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆತೂ ಸಹ ಕ್ವಿಂಟಾಲ್ ಗೆ ಗರಿಷ್ಠ 46,599 ರೂ. ದಾಖಲಾಗಿತ್ತು. ಈ ಮೂಲಕ ಬೆಲೆಯಲ್ಲಿ ಯಾವುದೇ ಏರಿಳಿತ ಕಾಣದೇ ಸ್ಥಿರತೆ ಕಾಯ್ದುಕೊಂಡಿದೆ. 2nd ಬೆಟ್ಟೆ ಅಡಿಕೆ ಗರಿಷ್ಠ 38,689 ರಿಂದ 41,329 ಏರಿಕೆಯಾಗಿದೆ. ಈ ಮೂಲಕ 3 ಸಾವಿರ ಏರಿಕೆ ಕಂಡಿದೆ.
ಇವತ್ತಿನ ಉತ್ತಮ ರಾಶಿಯ ಕನಿಷ್ಠ ಬೆಲೆ 45,311 ಆಗಿದ್ದು, ಗರಿಷ್ಠ ಬೆಲೆ 46,599 ಹಾಗೂ ಸರಾಸರಿ ಬೆಲೆ 45,795 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ 33,479, ಗರಿಷ್ಠ ಬೆಲೆ 41,329 ಹಾಗೂ ಸರಾಸರಿ ಬೆಲೆ 35, 973 ಆಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಜಗಳೂರು, ಹರಿಹರ, ನ್ಯಾಮತಿ, ಮಾಯಕೊಂಡ ಸೇರಿದಂತೆ ಎಲ್ಲ ಕಡೆ ಅಧಿಕ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಅಡಿಕೆ ಬೆಲೆ 38 ಸಾವಿರಕ್ಕೆ ಕುಸಿದು ರೈತರಲ್ಲಿ ಆತಂಕ ಉಂಟು ಮಾಡಿತ್ತು. ಇದೀಗ ಸ್ವಲ್ಪ ಚೇತರಿಕೆ ಕಂಡಿದ್ದರೂ ನೂರು, ಇನ್ನೂರು ರೂಪಾಯಿ ಏರಿಳಿತ ಕಾಣುತ್ತಿದೆ. ಜನವರಿ ತಿಂಗಳಲ್ಲಿ ಏರಿಕೆ ಕಾಣುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಮುಂದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.



