Connect with us

Dvgsuddi Kannada | online news portal | Kannada news online

ದಾವಣಗೆರೆ: ಅಂಧ ಮಕ್ಕಳ ವಸತಿ ಶಾಲೆಗೆ 1ರಿಂದ 10 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಅಂಧ ಮಕ್ಕಳ ವಸತಿ ಶಾಲೆಗೆ 1ರಿಂದ 10 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಯಿಂದ ನಡೆಸಲ್ಪಡುತ್ತಿರುವ ಅಂಧ ಮಕ್ಕಳ ಸರ್ಕಾರಿ ವಸತಿಯುತ ಶಾಲೆಯಲ್ಲಿ 2023-24 ರ ಸಾಲಿಗೆ ಪ್ರವೇಶ ಪಡೆಯಲು 6 ರಿಂದ 18 ವರ್ಷದೊಳಗಿನ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಂದರಿಂದ ಹತ್ತನೇ ತರಗತಿಯವರೆಗೆ ಅಂದ ಹೆಣ್ಣು ಮಕ್ಕಳಿಗೆ ಉಚಿತ ಊಟ, ವಸತಿ ಸೌಲಭ್ಯ ಹಾಗೂ ಗಂಡು ಮಕ್ಕಳಿಗೆ ವಸತಿ ರಹಿತ ಶಿಕ್ಷಣ ನೀಡಲಾಗುತ್ತಿದ್ದು, 80 ನಿವಾಸಿಗಳಿಗೆ ಅವಕಾಶವಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಗರದ ದೇವರಾಜ್ ಅರಸ್ ಬಡಾವಣೆಯ `ಬಿ` ಬ್ಲಾಕ್ ನಲ್ಲಿರುವ ಅಂಧ ಮಕ್ಕಳ ಸರ್ಕಾರಿ ವಸತಿಯುತ ಪಾಠಶಾಲೆ ಅಧೀಕ್ಷಕರನ್ನು ಸಂಪರ್ಕಿಸಿ ಪ್ರವೇಶಾತಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಹಾಯಕರಾದ ಗಂಗಾಧರಪ್ಪ ಹೆಚ್.ಎನ್- 9964534883, ಕಾತ್ಯಾಯಿನಿ ಸಿ.ಕೆ-9481358884, ಬಸವರಾಜ್ ಮಾಗಡಿ-9900497393, ಶಿವಾನಂದ ಶೇ ಗುಣಸಿ-8867112890 ಅಥವಾ ಇ-ಮೇಲ್- blindschooldavanagere@gmail.com ಸಂಪರ್ಕಿಸಲು ಜಿಲ್ಲೆಯ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top