Connect with us

Dvgsuddi Kannada | online news portal | Kannada news online

ದಾವಣಗೆರೆ: ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಇಬ್ಬರ ಸಾವು

ಪ್ರಮುಖ ಸುದ್ದಿ

ದಾವಣಗೆರೆ: ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಇಬ್ಬರ ಸಾವು

ದಾವಣಗೆರೆ: ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ  ಬೈಕ್ ಸವಾರಿಬ್ಬರು ಮೃತಪಟ್ಟಿರುವ ಘಟನೆ ಹರಿಹರ ತಾಲೂಕಿನ ಕೊಮಾರನಹಳ್ಳಿ ಬಳಿ ನಡೆದಿದೆ.

ರಭಸವಾಗಿ ಬಂದ ಲಾರಿ ಬೈಕ್ ಗೆ  ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಶಿವರಾಜ್ (35) ಹಾಗೂ ಪ್ರಮೋದ್ (33) ಮೃತಪಟ್ಟವರಾಗಿದ್ದಾರೆ. ಹೊನ್ನಾಳಿಯಿಂದ ದಾವಣಗೆರೆಗೆ ಬೈಕ್​ನಲ್ಲಿ ವೇಳೆ ಹಾವೇರಿಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಶಿವರಾಜ್ ನ್ಯಾಮತಿ ಪಟ್ಟಣ ನಿವಾಸಿ ಮತ್ತು ಮೃತ ಪ್ರಮೋದ್ ದಾವಣಗೆರೆ ನಗರದ ಬಂಬೂ ಬಜಾರ್ ನಿವಾಸಿಗಳೆಂದು ಗುರುತಿಸಲಾಗಿದೆ. ಈ ಘಟನೆ ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top