Connect with us

Dvgsuddi Kannada | online news portal | Kannada news online

ದಾವಣಗೆರೆ: ಟೈರ್ ಸ್ಫೋಟ; ಒಣ ಮೆಣಸಿಕಾಯಿ ತುಂಬಿದ ವಾಹನ ಪಲ್ಟಿ- ಸ್ಥಳದಲ್ಲಿಯೇ ಒಬ್ಬ ಸಾವು

ದಾವಣಗೆರೆ

ದಾವಣಗೆರೆ: ಟೈರ್ ಸ್ಫೋಟ; ಒಣ ಮೆಣಸಿಕಾಯಿ ತುಂಬಿದ ವಾಹನ ಪಲ್ಟಿ- ಸ್ಥಳದಲ್ಲಿಯೇ ಒಬ್ಬ ಸಾವು

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಸ್ಫೋಟಗೊಂಡು ಒಣ ಮೆಣಸಿನಕಾಯಿ ಚೀಲ ಸಾಗಿಸುತ್ತಿದ್ದ ಟಾಟಾ ಏಸ್‌ ವಾಹನ ಪಲ್ಟಿಯಾಗಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ನಡೆದಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವೈ.ರಾಮಪುರಂನ ಲಾಲಾ ಸ್ವಾಮಿ ಮೃತಪಟ್ಟಿದ್ದಾರೆ. ರಾಮಾಂಜನೇಯ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧ್ಯಾಹ್ನ 3 ಗಂಟೆ ಹೊತ್ತಿಗೆ ದಾವಣಗೆರೆಯ ರಾಸ್ತಾ ಹೋಟೆಲ್‌ ಬಳಿ ಟೈರ್‌ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ. ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ನೆರವಿಗೆ ಬಂದಿದ್ದಾರೆ. ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top