Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ವರ್ಷ 2600 ಗರ್ಭಪಾತ  ಪ್ರಕರಣ ದಾಖಲು

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ವರ್ಷ 2600 ಗರ್ಭಪಾತ  ಪ್ರಕರಣ ದಾಖಲು

ದಾವಣಗೆರೆ:  ಜಿಲ್ಲೆಯಲ್ಲಿ ಕಳೆದ ವರ್ಷ 23685 ಗರ್ಭಿಣಿಯರ ನೊಂದಣಿಯಾಗಿದ್ದು, ಈ ಪೈಕಿ 2600 ಗರ್ಭಪಾತ ಸಂಭವಿಸಿದ್ದು, ಹೆಣ್ಣು ಮಕ್ಕಳ ಲಿಂಗಾನುಪಾತ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು.ಹೆಚ್ಚು ಗರ್ಭಪಾತ ನಡೆಯುತ್ತಿರುವ ಆಸ್ಪತ್ರೆ, ನರ್ಸಿಂಗ್ ಹೋಂಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ದಿಶಾ ಸಮಿತಿ ಸದಸ್ಯ ಜೆ.ಪಿ. ಮುಪ್ಪಣ್ಣ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಡಿಹೆಚ್‍ಒ ಡಾ. ನಾಗರಾಜ್, ಪಿಸಿ & ಪಿಎನ್‍ಡಿಟಿ ಕಾಯ್ದೆಯನ್ವಯ ಪ್ರಸವಪೂರ್ವ ಲಿಂಗಪತ್ತೆ ಕಾನೂನು ಬಾಹಿರವಾಗಿದ್ದು, ಇತ್ತೀಚೆಗೆ ಜರುಗಿದ ಸಮಿತಿ ಸಭೆಯಲ್ಲಿಯೂ ಈ ಕುರಿತು ಚರ್ಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾತನಾಡಿ, ಅತಿ ಹೆಚ್ಚು ಗರ್ಭಪಾತ ಪ್ರಕರಣ ದಾಖಲಾಗಿರುವ ಆಸ್ಪತ್ರೆಗಳ ವಿವರ ನೀಡಿದಲ್ಲಿ, ಅಂತಹ ಆಸ್ಪತ್ರೆ, ನರ್ಸಿಂಗ್ ಹೋಂಗಳಿಗೆ ನಾವು ಹಾಗೂ ಜಿ.ಪಂ. ಸಿಇಒ ಅವರು ಖುದ್ದಾಗಿ ಆಕಸ್ಮಿಕ ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇವೆ ಎಂದರು. ಸಂಸದರು ಕೂಡ ಇದಕ್ಕೆ ದನಿಗೂಡಿಸಿ, ಹೆಚ್ಚಿನ ಗರ್ಭಪಾತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರಿಶೀಲಿಸಬೇಕು. ಒಂದು ವೇಳೆ ಯಾವುದೇ ಆಸ್ಪತ್ರೆಯಲ್ಲಿ ಅಕ್ರಮ ಕಂಡುಬಂದಲ್ಲಿ, ಅಂತಹವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top