ದಾವಣಗೆರೆ: ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಜನಸ್ಪಂದನ ಸಭೆಯನ್ನು ಪುನರಾರಂಭಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ. ಮಾ.17ರ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜನಸ್ಪಂದನ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿವಾರಕ್ಕೆ ಬದಲಾಗಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಜನಸ್ಪಂದನ ಸಭೆ ನಡೆಯಲಿದೆ. ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯುತ್ತಿದ್ದು ಹಾಗೂ ಎಷ್ಟು ದಿನಗಳಿಂದ ಆಗದೇ ಇದ್ದ ತಮ್ಮ ಕೆಲಸಗಳು ಕಾಲಮಿತಿಯಲ್ಲಿ ಆಗುವುದರಿಂದ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದ್ದ ಹಲವರು ನಿದರ್ಶನಗಳು ನಮ್ಮ ಮುಂದಿವೆ ಹಾಗಾಗಿ ಜನಸ್ಪಂದನ ಸಭೆ ಮತ್ತೆ ಆರಂಭಿಸಲಾಗುತ್ತಿದ್ದು, ಈ ತಿಂಗಳ 17 ಹಾಗೂ 31 ರಂದು ಜರುಗಲಿದೆ ಎಂದರು.



