ದಾವಣಗೆರೆ: ನೂತನವಾಗಿ ದಾವಣಗೆರೆ ಹರಿಹರ ನಗರಭಿವೃದ್ದಿ ಅಧಿಕಾರದ ಅಧ್ಯಕ್ಷರ ಅಧಿಕಾರ ಸ್ವೀಕರ ಸಮಾರಂಭದಲ್ಲಿ ಮಾತನಾಡಿರುವ ಸಂಸದರಾದ ಶ್ರೀ ಜಿ.ಎಂ. ಸಿದ್ದೇಶ್ವರ ರವರು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 30 ರಿಂದ 40 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಹೇಳಿಕೆ ನೀಡಿದ್ದು, ಮಾನ್ಯ ಸಂಸದರು 30 ಕೋಟಿ ಅಥವಾ 40 ಕೋಟಿ ಅನ್ನುವುದನ್ನು ಸಾರ್ವಜನಿಕರಿಗೆ ಸರಿಯಾಗಿ ತಿಳಿಸಬೇಕು ಅಂದಾಜು ಹೇಳಿಕೆ ಕೊಡುವುದನ್ನು ಬಿಡಬೇಕು ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ಆಗ್ರಹಿಸಿದ್ದಾರೆ.
ಇನ್ನು ಬಾತಿ ಕೆರೆ ಅಭಿವೃದ್ಧಿಗೆ 12 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಸದರು ತಿಳಿಸಿದ್ದು, ಬಾತಿ ಕೆರೆ ಅಭಿವೃದ್ಧಿಗೆ ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ರವರು ಕುಂದವಾಡ ಕೆರೆ ಅಭಿವೃದ್ಧಿ ಮಾದರಿಯಲ್ಲಿ ಯೋಜನೆ ರೂಪಿಸಿದ್ದಾಗ ಸ್ಥಳೀಯ ಕೆಲವರು ಅದಕ್ಕೆ ಅಡ್ಡಿಪಡಿಸಿ ಯೋಜನೆ ಸ್ಥಗಿತಕ್ಕೆ ಕಾರಣೀಭೂತರಾಗಿದ್ದಾರೆ, ಈಗಲಾದರೂ ಬಾತಿ ಕೆರೆಗೆ ಅಭಿವೃದ್ಧಿಯ ಭಾಗ್ಯ ದೊರೆಯಲಿ ಎಂಬುದು ನಮ್ಮ ಬಯಕೆಯಾಗಿದೆ ಎಂದರು.



