Connect with us

Dvgsuddi Kannada | online news portal | Kannada news online

ದಾವಣಗೆರೆ: ಮದುವೆಗೆ ಖರೀದಿ ಮಾಡಿದ್ದ 4.31 ಲಕ್ಷ ಮೌಲ್ಯದ ಚಿನ್ನ, ನಗದು ಕಳವು

ದಾವಣಗೆರೆ

ದಾವಣಗೆರೆ: ಮದುವೆಗೆ ಖರೀದಿ ಮಾಡಿದ್ದ 4.31 ಲಕ್ಷ ಮೌಲ್ಯದ ಚಿನ್ನ, ನಗದು ಕಳವು

ದಾವಣಗೆರೆ: ಮದುವೆಗಾಗಿ ಖರೀದಿಸಿ ಮನೆಯಲ್ಲಿಟ್ಟಿದ್ದ 4.31 ಲಕ್ಷ ಮೌಲ್ಯದ ಚಿನ್ನ, ನಗದು ಕಳ್ಳತನವಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನಗರದ ಶಾಸ್ತ್ರೀ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಸಮೀರ್ ಆಲಿ ಎಂಬುವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಆಲಿ ಅವರ ಅಕ್ಕನ ಮದುವೆಗೆ ಚಿನ್ನಾಭರಣ ಖರೀದಿಸಿ ಮನೆಯಲ್ಲಿ ಇಡಲಾಗಿತ್ತು.‌ ಕಪಾಟಿನ ಬೀಗ ಮುರಿದು ಚಿನ್ನ ಮತ್ತು ನಗದು ಕಳ್ಳತನವಾಗಿವೆ.

ಕೀ ಅನ್ನು ಕಪಾಟಿನ ಪಕ್ಕದಲ್ಲಿಯೇ ಇಡಲಾಗಿತ್ತು. ಮದುವೆಗೆ ಸಮಾನು ಖರೀದಿ ಮಾಡಲೆಂದು ಕಪಾಟು ತೆರೆದಾಗ ಕಳವಾಗಿರುವುದು ಗೊತ್ತಾಗಿದೆ. 2.50 ಲಕ್ಷ ನಗದು ಸಹ ಇತ್ತು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top