ದಾವಣಗೆರೆ: ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್ (ಚಿಪ್ಪು ಹಂದಿ) ವನ್ಯಜೀವಿಯ ಚಿಪ್ಪುಗಳ ಮಾರಾಟ ಮಾಡುತ್ತಿದ್ದ 18 ಅಂತರ್ ಜಿಲ್ಲಾ ಆರೋಪಿತರ ಬಂಧನ, ಸುಮಾರು 67 ಕೆಜಿ 700ಗ್ರಾಂ ಪ್ಯಾಂಗೊಲಿನ್ ಚಿಪ್ಪುಗಳು ವಶಕ್ಕೆ ಪಡೆಯಲಾಗಿದೆ.
ಹರಿಹರ- ಶಿವಮೊಗ್ಗ ರಸ್ತೆಯ ಬದಿಯಲ್ಲಿ ವನ್ಯ ಜೀವಿಗೆ ಸಂಬಂಧಿಸಿದ ಪ್ಯಾಂಗೊಲಿನ್ (ಚಿಪ್ಪು ಹಂದಿ) ವನ್ಯಜೀವಿಯ ಚಿಪ್ಪುಗಳನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಪೊಲೀಸರು ನಡೆಸಿದ್ದಾರೆ.
ಡಿವೈಎಸ್ಪಿ ಬಿ.ಎಸ್.ಬಸವರಾಜ, ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಬಿ.ವಿ ಗಿರೀಶ್ ಹಾಗೂ ಸಿಬ್ಬಂದಿಯವರಾದ ಪ್ರಕಾಶ್, ಮುತ್ತುರಾಜ, ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ದ್ಯಾಮೇಶ್, ಕೊಟ್ರೇಶ್ ರವರನ್ನೊಳಗೊಂಡ ಪೊಲೀಸ್ ತಂಡ ಹರಿಹರ- ಶಿವಮೊಗ್ಗ ರಸ್ತೆಯ ಹರಿಹರದ ಬಳಿ ಇರುವ ಶಿವಬಸವ ಡಾಬ ಬಳಿ ದಾಳಿ ಮಾಡಿ ಪ್ಯಾಂಗೊಲಿನ್ (ಚಿಪ್ಪು ಹಂದಿ) ವನ್ಯಜೀವಿಯ ಚಿಪ್ಪುಗಳನ್ನು ಸಾಗಿಸುತ್ತಿದ್ದ 18 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಆರೋಪಿತರಿಂದ ಸುಮಾರು 67ಕೆಜಿ 700 ಗ್ರಾಂ ಪ್ಯಾಂಗೊಲಿನ್ (ಚಿಪ್ಪು ಹಂದಿ) ವನ್ಯಜೀವಿಯ ಚಿಪ್ಪುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 2 ಓಮಿನಿ, 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಆರೋಪಿತರ ವಿರುದ್ಧ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.



