Connect with us

Dvgsuddi Kannada | online news portal | Kannada news online

ದೀಪಾವಳಿ‌ ಹಬ್ಬಕ್ಕೆ ಕೇಂದ್ರ, ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ; ತೈಲ ಬೆಲೆಯಲ್ಲಿ ಇಳಿಕೆ ಘೋಷಿಸಿದ ಸರ್ಕಾರ.. ಎಷ್ಟು ದರ ಇಳಿಕೆಯಾಗಿದೆ ಗೊತ್ತಾ..?

ಪ್ರಮುಖ ಸುದ್ದಿ

ದೀಪಾವಳಿ‌ ಹಬ್ಬಕ್ಕೆ ಕೇಂದ್ರ, ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ; ತೈಲ ಬೆಲೆಯಲ್ಲಿ ಇಳಿಕೆ ಘೋಷಿಸಿದ ಸರ್ಕಾರ.. ಎಷ್ಟು ದರ ಇಳಿಕೆಯಾಗಿದೆ ಗೊತ್ತಾ..?

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೇಂದ್ರ, ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದ್ದು, ನಿರಂತರವಾಗಿ ಏರಿಕೆಯಾಗುತ್ತಿದ್ದ ತೈಲ ಬೆಲೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ 10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ 5 ತಗ್ಗಿಸಿದೆ. ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ತಲಾ 7 ಕಡಿಮೆ ಮಾಡಲು  ತೀರ್ಮಾನಿಸಿದೆ.

ಕೇಂದ್ರ ಸರ್ಕಾರ ಕೈಗೊಂಡ ತೀರ್ಮಾನ, ಅಬಕಾರಿ ಸುಂಕದಲ್ಲಿ ಅತಿದೊಡ್ಡ ಕಡಿತವಾಗಿದೆ. 2020ರ ಮಾರ್ಚ್‌-ಮೇ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 13 ಹಾಗೂ 16ರಷ್ಟು ಸುಂಕ ಹೆಚ್ಚಿಸಲಾಗಿತಗತ್ತು. ಇದರಿಂದ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ 32.9ಕ್ಕೆ ಹಾಗೂ ಡೀಸೆಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ 31.8ಕ್ಕೆ ತಲುಪಿದ್ದವು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳವಾದ ಹಿನ್ನಲೆ ದಾಖಲೆಯ 100ರ ಗಡಿ ದಾಟಿತ್ತು. ಡೀಸೆಲ್ ಬೆಲೆ ಕೂಡ 100 ರೂಪಾಯಿ ದಾಟಿ ಸರ್ವಕಾಲಿಕ ದಾಖಲೆಯಾಗಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top