Connect with us

Dvgsuddi Kannada | online news portal | Kannada news online

ಸಾಲು ಮರದ ವೀರಚಾರರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ; ಪರಿಸರ ಪ್ರೇಮಿಗಳಿಗೆ ಮಾದರಿ

ದಾವಣಗೆರೆ

ಸಾಲು ಮರದ ವೀರಚಾರರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ; ಪರಿಸರ ಪ್ರೇಮಿಗಳಿಗೆ ಮಾದರಿ

  • ಗೋಪಾಲಗೌಡ, ಪರಿಸರವಾದಿ ಮತ್ತು ಕನ್ನಡಪರ ಹೋರಾಟಗಾರರು, ದಾವಣಗೆರೆ

ಸರ್ಕಾರವು 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಲು ಮರದ ವೀರಚಾರರಿಗೆ ಕೊಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಸರ್ಕಾರವು ನಿಜವಾದ ಸಾಧಕರನ್ನು ಹುಡುಕಿ ರಾಜ್ಯೋತ್ಸವ
ಪ್ರಶಸ್ತಿಯನ್ನು ಕೊಡುತ್ತಿದೆ. ಈ ಬಾರಿ ದಾವಣಗೆರೆಯ ಮಿಟ್ಲಕಟ್ಟೆಯ ಪರಿಸರ ಪ್ರೇಮಿ ಸಾಲು ಮರದ ವೀರಾಚಾರರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಅವರ ಸಾಧನೆಗೆ ಸಿಕ್ಕ ಫಲ. ಇಂತಹ ಪ್ರಶಸ್ತಿಗಳು ನಮ್ಮಂಥ ಪರಿಸರ ಪ್ರೇಮಿಗಳಿಗೆ ಪ್ರೇರಣೆ ಆಗುವಂತಹದು.

ವೀರಾಚಾರ ಅವರ ಸಾಧನೆ ಅಸಮಾನ್ಯ, ಅಸಾಧಾರಣ ಮತ್ತು ಅನನ್ಯ. ರಸ್ತೆ ಬದಿಯಲ್ಲಿ 2,500ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರ ಈ ಸಾಧನೆಗೆ ಯಾವತ್ತೋ ಪ್ರಶಸ್ತಿ ಸಿಗಬೇಕಾಗಿತ್ತು. ಆದರೆ, ಇದೀಗ ಪ್ರಶಸ್ತಿ ಸಿಕ್ಕಿರುವುದು ದಾವಣಗೆರೆ ಜನತೆ ಮತ್ತು ಪರಿಸರ ಪ್ರೇಮಿಗಳಿಗೆ ಸಿಕ್ಕ ಗೌರವದಂತಾಗಿದೆ.

ವೀರಾಚಾರರು ತುಂಬಾ ಕಡು ಬಡ ಕುಟುಂಬದಲ್ಲಿ ಬೆಳೆದ ವ್ಯಕ್ತಿ. ತಮ್ಮ ಜೀವನವನ್ನು ಸಾಗಿಸುವಲ್ಲಿ ತುಂಬಾ ಕಷ್ಟಪಟ್ಟು ರೈತರಿಗೆ ಬೇಕಾದ ಪರಿಕರಗಳ ಕುಲುಮೆ ಕೆಲಸವನ್ನು ಮಾಡುತ್ತಾ ಅದರ ಜೊತೆಗೆ ಗಿಡಗಳನ್ನು ನೆಟ್ಟು ಬೆಳೆಸುತ್ತಾ ಬಂದಿದ್ದಾರೆ. 35 ವರ್ಷಕ್ಕೂ ಹುಚ್ಚು ಕಾಲ ಸೈಕಲ್ಲಿನಲ್ಲಿ ಗಿಡಗಳನ್ನು ತೆಗೆದುಕೊಂಡು ಹೋಗಿ ನೆಟ್ಟು ನೀರುಣಿಸಿ ಬೆಳೆಸಿರುತ್ತಾರೆ. ವೀರಾಚಾರರು ನಮ್ಮಂತಹ ಪರಿಸರ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ.

ವೀರಾಚಾರರ ಸಾಧನೆಗೆ ಕಾರಣರಾಗಿದ್ದು, ಮಂಡಲ ಪ್ರಧಾನರು. ಎರಡು ಗಿಡ ಕೊಡುವಂತೆ ತಮ್ಮ ಊರಿನ ಪ್ರಧಾನರಲ್ಲಿ ಕೇಳಿದರಂತೆ. ಆಗ ಮಂಡಲ ಪ್ರಧಾನರು ಗಿಡ ಕೊಡಲಿಕ್ಕೆ ಆಗುವುದಿಲ್ಲ ಎಂದು ಹೇಳಿದರು‌. ಇದರಿಂದ ಬೇಸರದಿಂದ ಮನೆಗೆ ಬಂದು, ಬೇರೆ ಕಡೆಯಿಂದ ಹಣ ಕೊಟ್ಟು ಗಿಡಗಳಗನ್ನು ತಂದು ನೆಟ್ಟು ಬೆಳೆಸಿದರು.

ಅವರ ಸಾಧನೆ, ಪರಿಶ್ರಮ, ನಿಸ್ವಾರ್ಥ ಸೇವೆ ಪರಿಗಣಿಸಿ ಸರ್ಕಾರವೇ ಇವರ ಮನೆಗೆ ಬಂದರೂ ಸಹಿತ ಯಾವುದೇ ಆಸೆ-ಆಕಾಂಕ್ಷೆಗಳಿಗೆ ಬೆಲೆ ಕೊಡದೆ, ಸ್ವಾಭಿಮಾನದಿಂದ ಬದುಕಿ ಪರಿಸರವನ್ನು ಬೆಳೆಸಿರುತ್ತಾರೆ. ಅಷ್ಟೇ ಅಲ್ಲದೆ ಈ ಗಿಡಗಳನ್ನು ನೆಟ್ಟು ಬೆಳೆಸುವಾಗ ಕಡು ಬಡತನದಲ್ಲಿ ಹಣವಿಲ್ಲದಿದ್ದರೂ ಅವರ ಹೆಂಡತಿಯ ಬೆಂಡೋಲೆ ಯನ್ನು ಅಡ ಇಟ್ಟು ಬಂದಂತಹ ಹಣದಲ್ಲಿ ಮರಗಳನ್ನು ಬೆಳೆಸಿದ್ದಾರೆ.

ವೀರಾಚಾರರು ಬೆಳೆಸಿದ ಮರಗಳು ಶಾಮನೂರಿನಿಂದ ಜರಿಕಟ್ಟೆ ವರೆಗೂ 6,ಕಿ.ಮಿ.ನಷ್ಟು ಜನರಿಗೆ ನೆರಳು ನೀಡಿವೆ. ಸರ್ಕಾರದಿಂದ ಯಾವುದೇ ಸೌಲತ್ತು ತೆಗೆದುಕೊಳ್ಳದೆ ಸ್ವಂತ ದುಡಿಮೆಯಲ್ಲಿ ಒಂದು ಹೊತ್ತು ಊಟಕ್ಕೂ ಕಷ್ಟ ಇರುವಾಗ ಮರಗಳನ್ನು ಬೆಳೆಸುತ್ತಾ ಬಂದಿದ್ದಾರೆ. 2018ರಲ್ಲಿ ಸಾಲುಮರದ ವೀರಚಾರರ ಪುಸ್ತಕ ಬಿಡುಗಡೆಯಾಗಿದೆ.

ಇಂದಿಗೂ ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರ ಸ್ವಂತ ನಾಲ್ಕು ಚಕ್ರದ ವಾಹನದಲ್ಲಿ ಪರಿಸರದ ಬಗ್ಗೆ ಜನರಲ್ಲಿ ಪ್ರಚಾರ ಮಾಡುತ್ತಾ ಬರುತ್ತಿದ್ದಾರೆ. ಇನಮ್ಮನಾಡಿಗೆ ಮಾದರಿಯಾಗಿರುವುದು ಹೆಮ್ಮೆಯ ಸಂಗತಿ. ಈಗ ಇವರಿಗೆ 65 ವರ್ಷ ಆದರೂ ಅವರು ಭಾಷಣಕ್ಕೆ ನಿಂತರೆ ಸಭೆಗಳಲ್ಲಿ ಚಪ್ಪಾಳೆಗಳ ಸುರಿಮಳೆ. ನೇರ ನಡೆ, ನುಡಿ ಹೊಂದಿರುವ ವೀರಾಚಾರರ ಭಾಷಣವನ್ನು ಕೇಳಲು ಎಷ್ಟೋ ಜನ ಕಾದಿರುತ್ತಾರೆ.

ಪರಿಸರ ಅಂದರೆ ಸಾಲುಮರದ ವೀರಾಚಾರಿ, ವೀರಚಾರಿ ಎಂದರೆ ಪರಿಸರ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಜೊತೆ ಇನ್ನು ಹೆಚ್ಚಿನ ಪುರಸ್ಕಾರವು ಬರಲಿ ಎಂದು ಆಶಿಸೋಣ…

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top