ಡಿವಿಜಿ ಸುದ್ದಿ, ಮೈಸೂರು: ಇಂದಿರಾ ಕ್ಯಾಂಟೀನ್‌ಗೆ ಹೆಸರಿಡುವಾಗ ಕನ್ನಡಿಗರ ಹೆಸರು ಕಾಣಿಸಲಿಲ್ವಾ ಸಿದ್ದರಾಮಯ್ಯ ಅವರೇ ಎಂದು ಸಂಸದ ಪ್ರತಾಪ ಸಿಂಹ ಕಿಡಿಕಾರಿದ್ದಾರೆ.
ಬೆಂಗಳೂರಿನ ಯಲಹಂಕದ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಖಂಡಿಸಿದ ಅವರು, ನಿಮ್ಮ ಸರ್ಕಾರ ಕ್ಯಾಮಟೀನ್ ಗೆ ಹೆಸರಿಡುವಾಗ ಕಣ್ಣಿಗೆ ಕಂಡಿದ್ದು ಇಂದಿರಮ್ಮ ಹೆಸರು ಮಾತ್ರ. ಸಿದ್ದರಾಮಯ್ಯ ಅವರೇ ಇಂತಹ ಆತ್ಮದ್ರೋಹದ ಮಾತು ಬಿಡಿ. ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ರಾಜಕಾರಣ ಮಾಡಿದರೆ ಮಾತ್ರ ನಿಮಗೆ ಉಳಿಗಾಲ. ಇಲ್ಲದಿದ್ದರೆ ನಿರ್ನಾಮ ಆಗಿಬಿಡ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆಹರು, ಇಂದಿರಾ ಗಾಂಧಿಯ ಮಾತ್ರ ಕಾಂಗ್ರೆಸ್‌ಗೆ ಗೊತ್ತು. ಸರ್ದಾರ್ ವಲ್ಲಭಭಾಯ್ ಪಟೇಲ್, ಅಂಬೇಡ್ಕರ್ ಅವರನ್ನೇ ಸಹಿಸಿಕೊಳ್ಳಲಿಲ್ಲ. ಸಣ್ಣ ಸಣ್ಣ ಉದ್ಯಾನಗಳಿಗೆ ರಾಜೀವ್ ಗಾಂಧಿ, ನೆಹರು, ಇಂದಿರಾಗಾಂಧಿ ಹೆಸರಿಟ್ಟಿದ್ದಾರೆ. ಒಂದು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟರೆ, ಕಾಂಗ್ರೆಸ್‌ಗೆ ಯಾಕೆ ನೋವು ಎಂದುಕಿಡಿಕಾರಿದ್ದಾರೆ.



