ದಾವಣಗೆರೆ: ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡುತ್ತಿದ್ದ ತಂದೆ, ಮಕ್ಕಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 10.90 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಕಳ್ಳತನ ಪತ್ತೆ ಹೇಗೆ..?
ಹರಿಹರ ತಾ, ದೊಗ್ಗಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಎಂದಿನಂತೆ ಆರ್ಚಕ ರಾಜಪ್ಪ ಜ.02 ರಂದು ರಾತ್ರಿ 8 ಗಂಟೆಗೆ ಬೀಗವನ್ನು ಹಾಕಿಕೊಂಡು ಹೋಗಿದ್ದು, ಮರು ದಿನ ದಿನಾಂಕ : 03-01-2026 ರಂದು ಬೆಳಗಿನ ಜಾವ 3-40 ರ ಸಮಯದಲ್ಲಿ ಗ್ರಾಮದಸ್ಥರು ದೇವಸ್ಥಾನದ ಹತ್ತಿರ ಬಂದಿದ್ದಾಗ ದೇವಸ್ಥಾನದ ಬಾಗಿಲು ತೆರೆದಿದ್ದು, ಕೂಡಲೇ ಗ್ರಾಮಸ್ಥರು ಹಾಗೂ ದೇವಸ್ಥಾನದ ಅರ್ಚಕರು ಪರಿಶೀಲಿಸಿ ನೀಡಿದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿತ್ತು.
ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು
ದೇವಸ್ಥಾನದಲ್ಲಿದ್ದ ಬೆಳ್ಳಿಯ ಕಾಶಿ, ಬೆಳ್ಳಿ ಕಿರೀಟ, ಬೆಳ್ಳಿಯ ಆಂಜನೇಯ ಮುಖ, ಒಂದು ಬೆಳ್ಳಿಯ ಹಸ್ತ, ಬೆಳ್ಳಿಯ ಸಿಂಹದ ಮುಖ, ಒಂದು ಬೆಳ್ಳಿಯ ಛತ್ರಿ ಇವುಗಳನ್ನು ರಾತ್ರಿ ಸಮಯದಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು, ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಗಿತ್ತು.
ಆರೋಪಿಗಳು ಎಲ್ಲಿಯವರು..?
ಮೀ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಎಸ್ಪಿ ಉಮಾ ಪ್ರಶಾಂತ್ , ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಯುವರಾಜ ಕಂಬಳಿ ಪಿ.ಎಸ್.ಐ(ಕಾ&ಸು) ಶ್ರೀಮತಿ ಮಂಜುಳಾ ಡಿ ಪಿ.ಎಸ್.ಐ(ತನಿಖೆ) ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಪತ್ತೆ ಕಾರ್ಯ ನಡೆಸಿ ಪ್ರಕರಣದ ಆರೋಪಿತರುಗಳಾದ ಎ-1 ಶಿವುಕುಮಾರ @ ಶಿವು, 26 ವರ್ಷ, ಎ-2 ವಿರೇಶ, 68 ವರ್ಷ, ಎ-3 ಮಂಜುನಾಥ್ , ಕೂಲಿ ಕೆಲಸ, ವಾಸ : ಸ್ವಂತ ವಿಳಾಸ- ಯರಗುಂಟೆ ರಸ್ತೆ, ಆರ್ಟಿಓ ಕಚೇರಿ ಬಳಿ, ಎಂಜಿ ಬಿಲ್ಡಿಂಗ್ ಹತ್ತಿರ, ದಾವಣಗೆರೆ ನಗರ, ಹಾಲಿ ವಾಸ : ಶಂಷಿಪುರ ಗ್ರಾಮ, ಹರಿಹರ ತಾ ರವರನ್ನು ದಿ : 13-01-2026 ರಂದು ಬಾತ್ಮೀದಾರರ ಮಾಹಿತಿ ಮೇರೆಗೆ ಹರಿಹರ ಬೈಪಾಸ್ ಹತ್ತಿರ ವಶಕ್ಕೆ ಪಡೆದುಕೊಳ್ಳಲಾಗಿದೆ.
ದಾವಣಗೆರೆ: ಶಾಸಕ ಬಿ.ಪಿ. ಹರೀಶ್ ವಿರುದ್ಧ ಜಾತಿನಿಂದನೆ ಕೇಸ್ ದಾಖಲು
ದೇವಸ್ಥಾನಗಳೇ ಟಾರ್ಗೆಟ್
ಆರೋಪಿಗಳಿಂದ ಹರಿಹರ ಗ್ರಾಮಾಂತರ ಠಾಣೆಯಲ್ಲಿ 3 ಕೆಜಿ ಬೆಳ್ಳಿಯ ಆಭರಣಗಳು ಹಾಗೂ ಆರೋಪಿತರುಗಳು ಈ ಹಿಂದೆ ಮಲೆಬೆನ್ನೂರು ಠಾಣಾ ವ್ಯಾಪ್ತಿಯ ಮಲೆಬೆನ್ನೂರು ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಬಜಾಜ್ ಪ್ಲಾಟಿನಾ ಬೈಕ್ ಹಾಗೂ ಮಲೆಬೆನ್ನೂರು ಪಟ್ಟಣದ ನೆಹರು ನಗರದ ಶ್ರೀ ರಾಮ ಮಂದಿರದಲ್ಲಿ ಕಳ್ಳತನ ಮಾಡಿದ್ದ ಸುಮಾರು 20 ಗ್ರಾಂ ತೂಕದ ಬಂಗಾರದ 04 ತಾಳಿಗಳನ್ನು ಮತ್ತು ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಕೆಎ 17 ಇಎಸ್ 6892 ನೇ ಹಿರೋ ಡಿಲಕ್ಸ್ ಬೈಕ್ ಒಳಗೊಂಡಂತೆ ಒಟ್ಟು ಅಂದಾಜು 10,90,000/- ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ತನಿಖೆ ಮುಂದುವರೆದಿರುತ್ತದೆ.
ಆರೋಪಿತರ ಹಿನ್ನೆಲೆ : ಸದರಿ ಆರೋಪಿತರುಗಳು 2020 ರಲ್ಲಿ ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸ್ ಠಾಣೆಯಲ್ಲಿ ಕುರಿ ಕಳ್ಳತನ ಪ್ರಕರಣದಲ್ಲಿ ಆರೋಪಿತರಾಗಿರುತ್ತಾರೆ.
ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರುಗಳನ್ನು ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



