ದಾವಣಗೆರೆ: ದಾವಣಗೆರೆ ಮಹಾನಗರದಲ್ಲಿ ಇನ್ಮುಂದೆ ಹೊಸದಾಗಿ ಆಟೋ ಪರ್ಮಿಟ್ ನೀಡಬೇಡಿ ಎಂದು ಕರ್ನಾಟಕ ಚಾಲಕರ ಒಕ್ಕೂಟದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯ ಕಾರಣವೂ ಇದೆ. ದಿನಂಪ್ರತಿ ಹೊಸ ಆಟೋಗಳು ರೋಡಿಗಿಳಿಯುವುದರಿಂದ ಇದನ್ನು ನಂಬಿ ಜೀವನ ಕಷ್ಟಕರವಾಗಿದೆ ಎಂಬುದು ಚಾಲಕರ ಅಳಲು.
ದಾವಣಗೆರೆ: 10 ದಿನದ ಬಳಿಕ ಅಡಿಕೆ ದರ ದಿಢೀರ್ ಏರಿಕೆ | ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ನಗರದಲ್ಲಿ ಈಗಾಗಲೇ ಮಿತಿ ಮೀರಿದ ಆಟೋಗಳು ಇರುವುದರಿಂದ ಮತ್ತು ಪ್ರತಿನಿತ್ಯ ಹೊಸ ಆಟೋಗಳೂ ಸಹ ನಿರಂತರವಾಗಿ ಬರುತ್ತಿರುವುದರಿಂದ ಬಡ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಈ ಕೂಡಲೇ ನಗರದಲ್ಲಿ ನೀಡುತ್ತಿರುವ ಆಟೋ ರಿಕ್ಷಾಗಳ ಹೊಸ ಪರ್ಮಿಟ್ಗಳನ್ನು ನಿಲ್ಲಿಸುವಂತೆ ಸೂಚಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ದೂರಿದ್ದಾರೆ.
ವಾರ್ತಾ ಇಲಾಖೆಯಿಂದ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿ; ಪ್ರತಿ ತಿಂಗಳು 15 ಸಾವಿರ ಶಿಷ್ಯ ವೇತನ
ದಾವಣಗೆರೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭವಾ ದಾಗಿನಿಂದ ಇಂದಿನವರೆಗೂ ಆಟೋ ಪರ್ಮಿಟ್ ಅನ್ನು ನಿರಂತರವಾಗಿ ನೀಡುತ್ತಿದ್ದಾರೆ.ಇದರ ಪ್ರತಿಫಲವಾಗಿ ನಗರದಲ್ಲಿ ವಿಪರೀತ ಆಟೋಗಳಿದ್ದು, ಇಂದಿಗೂ ಪ್ರತಿನಿತ್ಯ ಹೊಸ ಆಟೋಗಳು ರೋಡಿಗಿಳಿಯುತ್ತಿವೆ. ಆಟೋ ಚಾಲಕರಿಗೆ ಇದರಿಂದ ತುಂಬಾ ತೊಂದರೆಯುಂಟಾಗಿದೆ. ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಚಾಲಕರ ಒಕ್ಕೂಟ ಆಗ್ರಹಿಸಿದೆ.
ವಾರ್ತಾ ಇಲಾಖೆಯಿಂದ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿ; ಪ್ರತಿ ತಿಂಗಳು 15 ಸಾವಿರ ಶಿಷ್ಯ ವೇತನ



