ದಾವಣಗೆರೆ: ಬೆಸ್ಕಾಂ ಉದ್ಯೋಗಿಯೊಬ್ಬರು ಕಚೇರಿಗೆ ಬರುವಾಗ ರಸ್ತೆಯಲ್ಲಿ ಚಿನ್ನದ ಕಡಗ ಕಳೆದುಕೊಂಡಿದ್ದರು. ಆ ಕಡಗ ಆಟೋ ಚಾಲಕನಿಗೆ ಸಿಕ್ಕಿದ್ದು, ಕಡಗವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಸನ್ಮಾನ ಮಾಡಲಾಗಿದೆ.
ಇಂದು ( ಮೇ 15) ಬೆಳಿಗ್ಗೆ11.00 ಗಂಟೆ ಸಮಯದಲ್ಲಿ ಡಾಲ್ಲೋರ್ಸ್ ಕಾಲೋನಿ ನಿವಾಸಿ ಶಿಲ್ಪ ಜಿ ಬೆಸ್ಕಾಂ ಕಚೇರಿಗೆ ಕೆಲಸಕ್ಕೆ ಹೋಗಲು ತಮ್ಮ ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಆಕಸ್ಮಿಕವಾಗಿ ತಮ್ಮ ಕೈಯಲ್ಲಿ ಇರುವ 21 ಗ್ರಾಂ ತೂಕದ ಚಿನ್ನದ ಕಡಗವನ್ನು ಕಳೆದುಕೊಂಡಿದ್ದರು. ಆ ಕಡಗ ಆಟೋ ಚಾಲಕ ಚಮನ್ ಸಾಬ್ ಎನ್ನುವವರಿಗೆ ಸಿಕ್ಕಿದ್ದು, ಆಟೋ ಚಾಲಕ ಕಡಗವನ್ನು ಸಂಜೆ ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಚಿನ್ನದ ಕಡಗ ವಾರಸುದಾರರಾದ ಶಿಲ್ಪ ಅವರನ್ನು ಠಾಣೆಗೆ ಕರೆಯಿಸಿ ಕಡಗ ಹಿಂದಿರುಗಿಸಿದ್ದಾರೆ. ಆಟೋ ಚಾಲಕರಾದ ಚಮನ್ ಸಾಬ್ ಪ್ರಾಮಾಣಿಕತೆಯನ್ನು ವಿದ್ಯಾನಗರ ಠಾಣೆಯ ಪೊಲೀಸ್ ನಿರೀಕ್ಷಕಿ ಶಿಲ್ಪ YS & ಪಿಎಸ್ಐ ವಿಜಯ ಎಂ ಅವರು ಶ್ಲಾಘಸಿ ಗೌರವಿಸಿದ್ದಾರೆ.



