ದಾವಣಗೆರೆ: ರೈತರ ಜಮೀನಿನ ಪಂಪ್ ಸೆಟ್ ಗೆ ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಸಲು 10 ಸಾವಿರ ಲಂಚ ಪಡೆಯುವಾಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಬೆಸ್ಕಾಂ (Bescom) ಕಚೇರಿಯ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ (lokayukta raid) ಬಿದ್ದಿದ್ದಾರೆ.
ದಾವಣಗೆರೆ: ಏ.5,6ರಂದು ಕೊಂಡಜ್ಜಿ ಕೆರೆಯಲ್ಲಿ ಜಲಸಾಹಸ ಕ್ರೀಡೆ
ಸಹಾಯಕ ಎಂಜಿನಿಯರ್ ಮೋಹನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮಲ್ಲಾಪುರದ ರೈತ ಬಿ.ಎಂ. ಮಂಜುನಾಥ ಅವರ ಹಿಂದೆ ಕೆಟ್ಟುಹೋಗಿದ್ದ ಟಿಸು ಬದಲಾಯಿಸಲು 10 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಜುನಾಥ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದಾವಣಗೆರೆ: ಒಂಟಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮನೆ ದರೋಡೆ; ಆರೋಪಿಗಳ ಬಂಧನ -18 ಲಕ್ಷ ಮೌಲ್ಯದ ಸ್ವತ್ತು ವಶ
ದೂರು ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಲಂಚ ಪಡೆಯುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಚ್.ಗುರುಬಸವಸ್ವಾಮಿ, ಪಿ.ಸರಳಾ ಹಾಗೂ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.