ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಳಿಚೋಡು ಮಾರ್ಗದ ದೇವಿಕೆರೆ ಬಳಿ ಅಪಘಾತವಾಗಿದ್ದ ಬೈಕ್ ಸವಾರನಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ರಕ್ಷಣೆಯನ್ನು ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ್ ಮಾಡಿದ್ದಾರೆ.
ಜಗಳೂರಿನ ಕಲ್ಲಯ್ಯ ಆಸ್ಪತ್ರೆಯಲ್ಲಿ ರೋಗಿಗಳ ಪರಿಶೀಲನೆ ನಡೆಸಿ ಡಾ. ಟಿ.ಜಿ.ರವಿಕುಮಾರ್ ವಾಪಸ್ ಬರುವಾಗ ದೇವಿಕೆರೆ ಕ್ರಾಸ್ ಬಳಿ ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದಿದ್ದನು. ಇದನ್ನು ಕಂಡು ಡಾ.ರವಿಕುಮಾರ್, ಕೂಡಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಾ.ರವಿಕುಮಾರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.



