ಮೈಸೂರು: ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆ ಏಪ್ರಿಲ್ 2023 ರ ಮೂಲಕ ಜವಾನ ( ಪ್ಯೂನ್), ಸ್ಟೆನೋಗ್ರಾಫರ್, ಟೈಪಿಸ್ಟ್ ಸೇರಿ ಪಟ್ಟು 59 ಹುದ್ದೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಮೈಸೂರು ಇಕೋರ್ಟ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 04-Jul-2023ರೊಳಗೆ ವೆಬ್ ಸೈಟ್ districts.ecourts.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು
- ಹುದ್ದೆ ವಿವರ:
- ಹುದ್ದೆಗಳ ಸಂಖ್ಯೆ: 59
- ಉದ್ಯೋಗ ಸ್ಥಳ: ಮೈಸೂರು – ಕರ್ನಾಟಕ
- ಹುದ್ದೆಯ ಹೆಸರು: ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್
- ವೇತನ: ರೂ.17000-52650/- ಪ್ರತಿ ತಿಂಗಳು
- ಪ್ಯೂನ್- 45
- ಟೈಪಿಸ್ಟ್- 3
ಅರ್ಹತೆ: ಪ್ಯೂನ್- 10 ನೇ ತರಗತಿ, ಟೈಪಿಸ್ಟ್- ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್, ಸ್ಟೆನೋಗ್ರಾಫರ್ ಗ್ರೇಡ್-III- ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ವಯೋಮಿತಿ: ಮೈಸೂರು ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 04-Jul-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆ: SC/ST/Cat-I ಅಭ್ಯರ್ಥಿಗಳು: 05 ವರ್ಷಗಳು, Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು, PH/ವಿಧವೆ ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ: ಪ್ಯೂನ್ ಹುದ್ದೆಗಳಿಗೆ: SC/ST/Cat-I & PH ಅಭ್ಯರ್ಥಿಗಳು: ಇಲ್ಲ, -2A/2B/3A & 3B ಅಭ್ಯರ್ಥಿಗಳು: ರೂ.100/-, ಸಾಮಾನ್ಯ ಅಭ್ಯರ್ಥಿಗಳು: ರೂ.200/- ಟೈಪಿಸ್ಟ್ ಹುದ್ದೆಗಳಿಗೆ: PH ಅಭ್ಯರ್ಥಿಗಳು: ಇಲ್ಲ, -, 2A/2B/3A & 3B ಅಭ್ಯರ್ಥಿಗಳು ರೂ.150, ಸಾಮಾನ್ಯ ಅಭ್ಯರ್ಥಿಗಳು: ರೂ.300/ ಸ್ಟೆನೋಗ್ರಾಫರ್ ಹುದ್ದೆಗಳಿಗೆ : SC/ST/Cat-I & PH ಅಭ್ಯರ್ಥಿಗಳು: ಇಲ್ಲ, 2A/2B/3A & 3B ಅಭ್ಯರ್ಥಿಗಳು: ರೂ.150/, ಸಾಮಾನ್ಯ ಅಭ್ಯರ್ಥಿಗಳು: ರೂ.300/-, ಪಾವತಿ ವಿಧಾನ: ಆನ್‌ಲೈನ್/ಚಲನ್, ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ.
ಮೈಸೂರು ಜಿಲ್ಲಾ ನ್ಯಾಯಾಲಯದ ವೇತನ ವಿವರ : ಪ್ಯೂನ್ ರೂ.17000-28950/-, ಬೆರಳಚ್ಚುಗಾರ ರೂ.21400-42000/-, ಸ್ಟೆನೋಗ್ರಾಫರ್ ಗ್ರೇಡ್-III ರೂ.27650-52650/. ಪ್ರಮುಖ ದಿನ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ: 05-06-2023, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ: 04-ಜುಲೈ-2023, ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನ :08-ಜುಲೈ-2023, ಅಧಿಕೃತ ವೆಬ್‌ಸೈಟ್: districts.ecourts.gov.in.



