ದಾವಣಗೆರೆ: ವಿಧಾನಸಭೆ ಚುನಾವಣೆ 2023 ರ ಹಿನ್ನೆಲೆಯಲ್ಲಿ ಇಂದು( ಏ.06)ಪೂರ್ವ ವಲಯ ಉಪ ಪೊಲೀಸ್ ಮಹಾ ನೀರಿಕ್ಷಕ ಡಾ.ಕೆ.ತ್ಯಾಗರಾಜನ್ ನೇತೃತ್ವದಲ್ಲಿ ದಾವಣಗೆರೆ ನಗರದ ವಿವಿಧ ಭಾಗಗಳಲ್ಲಿ ಪೊಲೀಸ್ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು.
ಪಥ ಸಂಚಲನವು ನಗರದ ಹೈಸ್ಕೂಲ್ ಮೈದಾನದಿಂದ ಆರಂಭಗೊಂಡು ಪಿ ಬಿ ರಸ್ತೆ, ಜಯದೇವ ವೃತ್ತ, ಶಿವಪ್ಪ ಸರ್ಕಲ್, ಕೆಟಿಜೆ ನಗರ , ವಿಧ್ಯಾರ್ಥಿ ಭವನ, ಸಿಜಿ ಆಸ್ಪತ್ರೆ ರಸ್ತೆ, ರಾಮ್ ಅಂಡ್ ಕೂ ವೃತ್ತ ಮೂಲಕ ಡಿ ಎ ಆರ್ ಕವಾಯತು ಮೈದಾನದಲ್ಲಿ ಮುಕ್ತಾಯಗೊಂಡಿತು.
ಪಥ ಸಂಚಲನದಲ್ಲಿ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ ಬಸರಗಿ, ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಮನಿ , ಡಿವೈಎಸ್ ಪಿ ಕೆ ಕೃಷ್ಣಮೂರ್ತಿ, ಮತ್ತು ಸಿ.ಆರ್.ಪಿ.ಎಫ್ ಅಧಿಕಾರಿಗಳಾದ ಶೈಲಾ ಎಸ್ ಮಹಾರಾಣಾ, ತಾರಾಚಂದ್, ಎಲ್ ಎನ್ ಉಪದ್ಯಾಯ್ ಮತ್ತು ಸಿಬ್ಬಂದಿಗಳು ಸೇರಿದಂತೆ ನಗರ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ DAR ಅಧಿಕಾರಿ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.



