ದಾವಣಗೆರೆ; ದೇಶದಾದ್ಯಂತ ಕನ್ನಡದ ಕಾಂತಾರ ಸಿನಿಮಾ ಯಶಸ್ಸು ಗಳಿಸಿದೆ. ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ಸಿನಿಮಾಗೆ ದೇಶದ ಎಲ್ಲ ಭಾಷೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕನ್ನಡದ ಹೆಮ್ಮೆಯ ಚಿತ್ರ ನೋಡಲು ಜನರು ಗುಂಪು ಗುಂಪಾಗಿ ಬರುತ್ತಿದ್ದಾರೆ. ನಿನ್ನೆಯಷ್ಟೇ ದಾವಣಗೆರೆಯ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಪೊಲೀಸ್ ಸಿಬ್ಬಂದಿ ಸಿನಿಮಾವನ್ನು ಕುಟುಂಬ ಸಮೇತರಾಗಿ ಬಂದು ಸಿನಿಮಾ ವೀಕ್ಷಿಸಿದ್ದರು. ಇದೀಗ ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ಕೂಡ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ.
ದಾವಣಗೆರೆ ನಗರದ ಎಸ್ಎಸ್ ಮಾಲ್ನಲ್ಲಿ ಶಾಮನೂರು ಶಿವಶಂಕರಪ್ಪ ಸಿನಿಮಾ ವೀಕ್ಷಣೆ ಮಾಡಿದರು. ಅವರೊಂದಿಗೆ ಅಥಣಿ ವೀರಣ್ಣ, ಡಾ.ದೀಪಕ್ ಬೋಂದಾಡೆ, ಡಿ.ಬಸವರಾಜ್, ಡಾ.ಎಂ.ಜಿ.ಈಶ್ವರಪ್ಪ, ಎಸ್.ಕೆ.ವೀರಣ್ಣ, ಬಸವರಾಜ್, ದಿನೇಶ್ ಕೆ ಶೆಟ್ಟಿ, ಅಲಕಾನಂದ ರಾಮದಾಸ್, ಲಯನ್ ಸತೀಶ್, ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆಯ ಸದಸ್ಯರು, ಮುಖಂಡರು ಚಿತ್ರ ವೀಕ್ಷಿಸಿದರು.