Connect with us

Dvgsuddi Kannada | online news portal | Kannada news online

ಉಪ ಸಭಾಪತಿ ಆನಂದ ಮಾಮನಿ ನಿಧನ; ಬೆಳಗಾವಿಯ ಮತ್ತೋರ್ವ ಪ್ರಭಾವಿ ನಾಯಕ ಅಗಲಿಕೆ

ಪ್ರಮುಖ ಸುದ್ದಿ

ಉಪ ಸಭಾಪತಿ ಆನಂದ ಮಾಮನಿ ನಿಧನ; ಬೆಳಗಾವಿಯ ಮತ್ತೋರ್ವ ಪ್ರಭಾವಿ ನಾಯಕ ಅಗಲಿಕೆ

ಬೆಂಗಳೂರು:ವಿಧಾನ ಸಭೆ ಉಪ ಸಭಾಪತಿ ಆನಂದ ಮಾಮನಿ(56) ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತಡರಾತ್ರಿ ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಿಮ ದರ್ಶನ ಪಡೆದಿದ್ದಾರೆ.ಡೆಪ್ಯುಟಿ ಸ್ಪೀಕರ್‌ ಆನಂದ ಮಾಮನಿ ಅವರ ತಂದೆಯೂ ಡೆಪ್ಯುಟಿ ಸ್ಪೀಕರ್‌ ಆಗಿದ್ದಾಗಲೇ ಮೃತಪಟ್ಟಿರುವುದು ಆಕಸ್ಮಿಕವಾಗಿದೆ.

ಆನಂದ ಮಾಮನಿ ಕ್ರಿಯಾಶೀಲ ರಾಜಕಾರಣಿಯಾಗಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಇತ್ತೀಚೆಗಷ್ಟೇ ಉಮೇಶ್ ಕತ್ತಿ ಅವರನ್ನು ಕಳೆದುಕೊಂಡಿದ್ದೇವೆ. ಈಗ ಮತ್ತೆ ಬೆಳಗಾವಿ ಜಿಲ್ಲೆಯ ಮತ್ತೊಬ್ಬರನ್ನು ಕಳೆದುಕೊಂಡಿದ್ದೇವೆ ಎಂದರು.

ಆನಂದ ಮಾಮನಿ ಬಹಳ ಸಣ್ಣ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದವರು. ಮಾದರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ನೀರಾವರಿ, ರಸ್ತೆ, ಶಾಲಾ ಕಟ್ಟಡಗಳು ಸೇರಿದಂತೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದರು. ಕ್ಷೇತ್ರವನ್ನು ಪ್ರೀತಿಸುತ್ತಿದ್ದರು. ಕ್ಷೇತ್ರದ ಜನರು ಕೂಡ ಅವರನ್ನು ಅಷ್ಟೇ ಪ್ರೀತಿ ಮಾಡಿದ್ದರು. ಆನಂದ ಮಾಮನಿ ಮತ್ತು ನಮ್ಮ ನಡುವೆ ಉತ್ತಮ ಒಡನಾಟವಿತ್ತು. ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದುಕೊಂಡಿರಲಿಲ್ಲ. ಸವದತ್ತಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮಣಿಪಾಲ್ ಆಸ್ಪತ್ರೆಯ ಬಳಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೆಳಗಾವಿ ಮೂಲದ ಮೂವರು ಪ್ರಭಾವಿ ಭಾಜಪ ನಾಯಕರು ವಿಧಿವಶರಾಗಿದ್ದು,ಈ ಭಾಗದದಲ್ಲಿ ಬಿಜೆಪಿಗೆ ಆಘಾತವಾದಂತಾಗಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ, ಅರಣ್ಯ ಸಚಿವ ಉಮೇಶ್ ಕತ್ತಿ ಬಳಿಕ ಈಗ ಆನಂದ ಮಾಮನಿ ಸಾವಿಗೀಡಾಗಿದ್ದಾರೆ.

ಆನಂದ ಮಾಮನಿ ಅವರ ತಂದೆ ಚಂದ್ರಶೇಖರ ಮಾಮನಿ ಅವರು1995-1999 ಅವಧಿಯಲ್ಲಿ ಡೆಪ್ಯುಟಿ ಸ್ಪೀಕರ್‌ ಆಗಿದ್ದರು. ಈ ಹುದ್ದೆಯಲ್ಲಿ ಇದ್ದಾಗಲೇ ಇಹಲೋಕ ತ್ಯಜಿಸಿದ್ದರು. ಇದೀಗ ಕಾಕತಾಳಿಯ ಎಂಬಂತೆ ಆನಂದ ಮಾಮನಿ ಸಹ ಅದೇ ಹುದ್ದೆಯಲ್ಲಿದ್ದಾಗ ಸಾವಿಗೀಡಾಗಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top