ಬೆಂಗಳೂರು: ಬಿಜೆಪಿ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಸಿಎಂ ಯಡಿಯೂರಪ್ಪನವರೇ ಇದೆಲ್ಲಾ ಬಹಳ ದಿನ ನಡೆಯೋದಿಲ್ಲ ಎಂದು ಪುತ್ರನ ಬಂಧನಕ್ಕೆ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಸರ್ಕಾರ ನನ್ನ, ನನ್ನ ಕುಟುಂಬ, ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ದೇವರ ಹೆಸರಿನಲ್ಲಿ ಧರ್ಮವನ್ನು ಒಡೆದು ಆಳೋದಕ್ಕೆ ಹೊರಡಿದ್ದೀರಿ. ಇದೆಲ್ಲಾ ಹೆಚ್ಚು ದಿನ ನಡೆಯೋದಿಲ್ಲ. ಈವರೆಗೆ ನನ್ನ ಪುತ್ರ ಬಸವೇಶ್ ಸೇರಿದಂತೆ 15 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಬಗ್ಗೆ ನಾವು ದೂರು ಕೊಟ್ಟರೇ ಒಬ್ಬರೂ ನಮ್ಮ ದೂರಿನ ಅನ್ವಯ ಬಂಧಿಸಿಲ್ಲ. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ದೌರ್ಜನ್ಯ ಮಾಡುತ್ತಿದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



