Connect with us

Dvgsuddi Kannada | online news portal | Kannada news online

ಸಿಡಿ ಪ್ರಕರಣದ ಹಿಂದೆ ಕನಕಪುರದ ಷಡ್ಯಂತ್ರವಿದೆ: ಸಚಿವ ಸಿ.ಪಿ. ಯೋಶ್ವರ್ ಸ್ಫೋಟಕ ಹೇಳಿಕೆ

ಪ್ರಮುಖ ಸುದ್ದಿ

ಸಿಡಿ ಪ್ರಕರಣದ ಹಿಂದೆ ಕನಕಪುರದ ಷಡ್ಯಂತ್ರವಿದೆ: ಸಚಿವ ಸಿ.ಪಿ. ಯೋಶ್ವರ್ ಸ್ಫೋಟಕ ಹೇಳಿಕೆ

ಬೆಂಗಳೂರು: ಸಿಡಿ ಪ್ರಕಣದ ಹಿಂದೆ ಕನಕಪುರದ ಷಡ್ಯಂತ್ರವಿದೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಿಡಿ ಪ್ರಕರಣಕ್ಕೆ ಕನಕಪುರ ಮತ್ತು ಬೆಳಗಾವಿ ಕಡೆಯವರು ಕಾರಣ ಎಂದರು. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಡ್ಯಂತ್ರ ಇದೆ. ಮುಂದಿನ ದಿನಗಳಲ್ಲಿ ಅವರು ರಾಜಕೀಯವಾಗಿ  ಅನುಭವಿಸುತ್ತಾರೆ ಎಂದು ಸಿಪಿ ಯೋಗೇಶ್ವರ್ ಹೇಳಿದರು.

ಆರು‌ ಜನ ಸಚಿವರು ಯಾಕೆ ಕೋರ್ಟ್ ಗೆ ಹೋಗಿದ್ದಾರೋ ಗೊತ್ತಿಲ್ಲ. ಆ ಸಚಿವರನ್ನೇ ಕೇಳಬೇಕು. ಅವರ ವೈಯಕ್ತಿಕ ರಕ್ಷಣೆಗೆ ಕೋರ್ಟ್ ಮೊರೆ ಹೊಗಿರಬಹುದು. ಯಾರು ಕೋರ್ಟ್ ಮೊರೆ ಹೋಗಿದ್ದಾರೋ ಅವರನ್ನೇ ಕೇಳಿ ಎಂದರು. ಮೈತ್ರಿ ಸರ್ಕಾರ ಬೀಳಿಸಿದ ಕಾರಣ ಕೆಲವರು ಷಡ್ಯಂತ್ರ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ‌ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ರಾಜಕೀಯ ಷಂಡ್ಯಂತ್ರ ನಡೆದಿದೆ. ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ ಎಂದು ಯೋಗೇಶ್ವರ್ ಹೇಳಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top