ದಾವಣಗೆರೆ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ದಾವಣಗೆರೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ ವರೆಗೆ 9ನೇ ವರ್ಷದ ಪಾದಯಾತ್ರೆ ಆಯೋಜಿಸಲಾಗಿದೆ. ನಗರದ ಬಂಬೂ ಬಜಾರ್ ರಸ್ತೆಯ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದಿಂದ ಮಾ.02 ರ ಬೆಳಗ್ಗೆ 05 ಗಂಟೆಯಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಪಾದಯಾತ್ರೆ ಮಾ.09ಕ್ಕೆ ಧರ್ಮಸ್ಥಳ ತಲುಪಲಿದ್ದು, ಪಾದಯಾತ್ರೆ ಮಧ್ಯೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಪಾದಯಾತ್ರೆ ಪ್ರತಿದಿನ ಬಳಗ್ಗೆ 04 ಗಂಟೆಯಿಂದ ಪ್ರಾರಂಭವಾಗಲಿದೆ. ಪಾದಯಾತ್ರೆಗೆ ಯಾರು ಬೇಕಾದರೂ ಸ್ವಯಂ ಪ್ರೇರಣೆಯಿಂದ ಬಂದು ಸೇರಿಕೊಳ್ಳಬಹುದು. ಪಾದಯಾತ್ರೆಯಲ್ಲಿ ಭಾಗವಹಿಸುವವರು 9035216933,9986630107,9902948262 ಸಂಪರ್ಕಿಸಿ. ನಾಳೆ ದಾವಣಗೆರೆ ಮೇಯರ್ ಚುನಾವಣೆಗೆ ಅಖಾಡ ಸಜ್ಜು: ಕಾಂಗ್ರೆಸ್ –ಬಿಜೆಪಿ ನಡುವೆ ಬಿಗ್ ಫೈಟ್; ಯಾರಗ್ತಾರೆ ಮೇಯರ್..?



