ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಶೀಘ್ರದಲ್ಲೇ 100 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಿದೆ ಎಂಬ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
100 ರೂಪಾಯಿ, 10 ರೂಪಾಯಿ ಮತ್ತು 5 ರೂಪಾಯಿಗಳ ಮೂರು ಹಳೆಯ ನೋಟುಗಳ ಮುಂದಿನ ದಿನಗಳಲ್ಲಿ ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕುರಿತು ಮಾಧ್ಯಮಗಳ ಕೆಲವು ವಿಭಾಗಗಳಲ್ಲಿನ ವರದಿಗಳಿಗೆ ಸಂಬಂಧಿಸಿದಂತೆ ಆರ್ ಬಿಐ ಸ್ಪಷ್ಟನೆ ನೀಡಿದೆ. ಈ ನೋಟುಗಳನ್ನು ಹಿಂಪಡೆಯುವ ವರದಿಗಳು ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದೆ.
ಈ ಎಲ್ಲಾ ಹಳೆಯ ನೋಟುಗಳು ಮಾರ್ಚ್-ಏಪ್ರಿಲ್ ನಿಂದ ಚಲಾವಣೆಯಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಜನರಲ್ ಮ್ಯಾನೇಜರ್ ಬಿ.ಮಹೇಶ್ ನೀಡಿದ್ದಾರೆ ಎಂದು ವರದಿಯಾಗಿತ್ತು.



