ನವದೆಹಲಿ: ಭಾರತದ ಯಶಸ್ವಿ ನಾಯಕ, ವಿಕೆಟ್ ಕೀಪರ್ ಆಗಿ, ಭಾರತಕ್ಕೆ ಟಿ 20 ವಿಶ್ವಕಪ್ ಏಕದಿನ ವಿಶ್ವಕಪ್ , ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟಿದ್ದ ಎಂ.ಎಸ್.ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.
ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದ್ದ ದೋನಿ, 15 ವರ್ಷಗಳ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜರ್ನಿಗೆ ವಿದಾಯ ಹೇಳಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕೀಪರ್ ಆಗಿ ತಮ್ಮ ಮಿಂಚಿನ ಆಟದ ಮೂಲಕವೇ ಕ್ರಿಕೆಟ್ ಪ್ರಿಯರನ್ನು ಹುಬ್ಬೇರಿಸುವಂತೆ ಮಾಡುತ್ತಿದ್ದರು.

ಅಭಿಮಾನಿಗಳಿಗೆ ಮತ್ತೊಂದು ಸಂತಸ ವಿಚಾರವೆಂದರೆ ಐಪಿಎಲ್‍ನಲ್ಲಿ ಧೋನಿ ಆಟವಾಡಲಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಧೋನಿ, ನಿಮ್ಮ ಪ್ರೀತಿ, ಬೆಂಬಲಕ್ಕೆ ತುಂಬು ಹೃದಯದ ಧನ್ಯವಾದಗಳು. ನಾನು ನಿವೃತ್ತಿಯಾಗಿದ್ದೇನೆಂದು ಪರಿಗಣಿಸಿ ಎಂದು ಬರೆದುಕೊಂಡಿದ್ದಾರೆ.
ಎಂಎಸ್ ಧೋನಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ದೂರ ಉಳಿದಿದ್ದರು. ವಿವಿಧ ಚಟುವಟಿಕೆಗಳ ಮೂಲಕ ರಜೆ ದಿನಗಳನ್ನು ಕಳೆಯುತ್ತಿದ್ದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೊನೆಗೂ ಗುಡ್ ಬಾಯ್ ಹೇಳಿದ್ದಾರೆ.

ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ಯಶಸ್ವಿ ನಾಯಕ ಧೋನಿ, ಐಪಿಎಲ್ ನಲ್ಲಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಹಾಗೇ ಐಪಿಎಲ್ ನಲ್ಲೂ ಸಾಕಷ್ಟು ಬಾರಿ ಪ್ರಶಸ್ತಿಗಳಿಸಿದ್ದರು.
ಮಹೇಂದ್ರ ಸಿಂಗ್ ಧೋನಿ ಭಾರತದ ಪರ 90 ಟೆಸ್ಟ್, 350 ಒಂದು ದಿನದ ಪಂದ್ಯ ಹಾಗೂ 98 ಟ್ವೆಂಟಿ ಟ್ವೆಂಟಿ ಪಂದ್ಯ ಆಡಿದ್ದರು. ಏಕದಿನದ ಪಂದ್ಯದಲ್ಲಿ 10776 ರನ್ ಗಳಿಸಿದ್ದಾರೆ.
ಕ್ಯಾಪ್ಟನ್ ಆದಾಗ ಸಾಕಷ್ಟು ಯುವ ಆಟಗಾರಿಗೆ ಅವಕಾಶ ನೀಡಿದ್ದರು. ಇಡೀ ವಿಶ್ವದಾದ್ಯಂತ ಧೋನಿ ಫ್ಯಾನ್ ಗಳಿದ್ದಾರೆ. 2019 ರ ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್ ನಿಂದ ದೂರುವೇ ಉಳಿದಿದ್ದರು. 2019 ವಿಶ್ವ ಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯವೇ ದೋನಿ ಕೊನೆಯ ಪಂದ್ಯವಾಗಿದೆ.



