Connect with us

Dvgsuddi Kannada | online news portal | Kannada news online

ರಾಶಿ ಭವಿಷ್ಯ

ಜ್ಯೋತಿಷ್ಯ

ರಾಶಿ ಭವಿಷ್ಯ

ಶುಭ ಶನಿವಾರ-ಆಗಸ್ಟ್-08,2020 ರಾಶಿ ಭವಿಷ್ಯ

  • ಸೂರ್ಯೋದಯ: 06:10, ಸೂರ್ಯಸ್ತ: 18:40
  • ಶಾರ್ವರಿ ಶಕ ಸಂವತ
    ಶ್ರಾವಣ ಮಾಸ ದಕ್ಷಿಣಾಯಣ
  • ತಿಥಿ: ಪಂಚಮೀ – 28:18+ ವರೆಗೆ
    ನಕ್ಷತ್ರ: ಉತ್ತರಾ ಭಾದ್ರ – 16:12 ವರೆಗೆ
    ಯೋಗ: ಧೃತಿ – ಪೂರ್ಣ ರಾತ್ರಿ ವರೆಗೆ
    ಕರಣ: ಕೌಲವ – 15:09 ವರೆಗೆ ತೈತಲೆ – 28:18+ ವರೆಗೆ
  • ದುರ್ಮುಹೂರ್ತ: 06:10 – 07:00
    ದುರ್ಮುಹೂರ್ತ : 07:00 – 07:50
  • ವರ್ಜ್ಯಂ: 29:39+ – 31:26+
  • ರಾಹು ಕಾಲ: 09:00 – 10:30
    ಯಮಗಂಡ: 13:30 – 15:00
    ಗುಳಿಕ ಕಾಲ: 06:00 – 07:30
  • ಅಮೃತಕಾಲ: 10:52 – 12:39
    ಅಭಿಜಿತ್ ಮುಹುರ್ತ: 12:00 – 12:50

“ಜ್ಯೋತಿಷ್ಯಶಾಸ್ತ್ರ”
ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ಮಧ್ಯೆ ವಿಚ್ಛೇದನ ಹೆಚ್ಚಾಗುತ್ತಿದೆ ಏಕೆ?

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು.
ನಿಮ್ಮ ಕುಂಡಲಿಯಲ್ಲಿ 2 ನೇ ಮನೆ ,7 ನೇ ಮನೆ 11ನೇ ಮನೆ ಗ್ರಹಗಳೊಂದಿಗೆ ಶುಭಗ್ರಹಗಳಿದ್ದರೆ ತುಂಬಾ ಒಳ್ಳೆಯದು ಫಲ ನಿರೀಕ್ಷಣೆ ಮಾಡುವಿರಿ.

ನಿಮ್ಮ ಲಗ್ನ ಕುಂಡಲಿದಲ್ಲಿ ಈ ಕೆಳಗಿನಂತೆ ಲಕ್ಷಣಗಳು ಕಂಡರೆ,

7ನೇ ಮನೆಯಲ್ಲಿ ಚಂದ್ರ ಇದ್ದರೆ, ದಾಂಪತ್ಯ ಜೀವನ ತೃಪ್ತಿ ದಾಯಕ.

7ನೇ ಮನೆಯಲ್ಲಿ ಬುಧ ಇದ್ದರೆ ದಾಂಪತ್ಯ ಜೀವನ ಸುಖಮಯ.

7ನೇ ಮನೆಯಲ್ಲಿ ಗುರು ಇದ್ದರೆ ಒಳ್ಳೆಯ ನಡತೆ ಹೆಂಡತಿ ಸಿಗುತ್ತಾಳೆ.

ನಿಮ್ಮ ಜನ್ಮಕುಂಡಲಿಯಲ್ಲಿ ಮನೆ ,ಆಸ್ತಿ ಖರೀದಿಸುವ ಯೋಗಫಲ ……

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕೆಲವರು ರಾತ್ರಿ-ಹಗಲು ಕಷ್ಟಪಟ್ಟು ದುಡಿದರೂ ಕೂಡ ಆಸ್ತಿಪಾಸ್ತಿ ಕರಿದಿಸಲು ಅಸಾಧ್ಯ. ಕೆಲವರು ಸಾಕಷ್ಟು ಆಸ್ತಿಪಾಸ್ತಿ ಖರೀದಿಸುವರು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ತಮಗೆ ಸಹಜವಾಗಿ ಕಾಡುತ್ತವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಮ್ಮ ಜನ್ಮ ಕುಂಡಲಿ ಪರೀಕ್ಷಿಸಬೇಕು.ಗ್ರಹಗಳ ಸ್ಥಾನ, ದೃಷ್ಟಿ ಇದನ್ನು ಪರೀಕ್ಷಿಸಿ ತಿಳಿಸಬೇಕು.
ಜನ್ಮ ಜಾತಕದಲ್ಲಿ ಲಗ್ನದಿಂದ ನಾಲ್ಕನೇ ಮನೆ ಆಸ್ತಿ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ತೋರಿಸುತ್ತದೆ. ಈ ಮನೆಯಲ್ಲಿ ಲಾಭದಾಯಕ ಗ್ರಹ ಹಾಗೂ ಶುಭ ಗ್ರಹಗಳು ಇದ್ದರೆ ಅವರು ಆಸ್ತಿ ಖರೀದಿಸುವ ಅವಕಾಶ ತುಂಬಾ ಇದೆ. ಅಷ್ಟೇ ಅಲ್ಲ ಆಸ್ತಿ ಸಂಸಾರದ ಜೊತೆ ಆನಂದಮಯವಾದ ಕುಟುಂಬ ನಡೆಸುತ್ತಾರೆ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಬುಧನಿದ್ದರೆ ವ್ಯಕ್ತಿ ಸುಂದರವಾದ ಮನೆಯನ್ನು ಹೊಂದುವನು.
ಲಗ್ನದಿಂದ 4ನೇ ಸ್ಥಾನದಲ್ಲಿ ಚಂದ್ರಗ್ರಹ ಇದ್ದು ಉತ್ತಮ ಫಲ ನೀಡುತ್ತಿದ್ದರೆ ಹೊಸ ಮನೆ ಖರೀದಿಸುವ ಯೋಗ ಪ್ರಾಪ್ತಿ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಗುರು ಇದ್ದರೆ ಹೆಚ್ಚು ಲಾಭ ಭದ್ರವಾದ ಮನೆ ಪ್ರಾಪ್ತಿ.
ಲಗ್ನದಿಂದ 4ನೇ ಸ್ಥಾನದಲ್ಲಿ ರವಿ ಮತ್ತು ಕೇತು ಇದ್ದರೆ ದುರ್ಬಲ ನಿವೇಶನ ಪ್ರಾಪ್ತಿ.
ಲಗ್ನದಿಂದ 4ನೇ ಸ್ಥಾನದಲ್ಲಿ ಶನಿ ಅಥವಾ ರಾಹು ಇದ್ದರೆ ಹಳೆಯ ನಿವೇಶನ ಪ್ರಾಪ್ತಿ.
ಲಗ್ನದಿಂದ ನಾಲ್ಕನೇ ಸ್ಥಾನದಲ್ಲಿ ಶುಕ್ರ ಇದ್ದರೆ ಸುಂದರವಾದ ಮನೆ ಪ್ರಾಪ್ತಿ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಮಂಗಳ ಇದ್ದರೆ ಮನೆ ಬೆಂಕಿಗಾಹುತಿ ಸಾಧ್ಯತೆ ಇದೆ.
ಲಗ್ನದಿಂದ ನಾಲ್ಕನೇ ಮನೆಯಲ್ಲಿ ಚಂದ್ರ ಮತ್ತು ಶುಕ್ರ ಜೊತೆಯಾಗಿ ಇದ್ದರೆ ನೀವು ಕಾಂಪ್ಲೆಕ್ಸ್ ಅಂದರೆ ಬಹುಮಾಡಿ ಕಟ್ಟಡವನ್ನು ಖರೀದಿಸಬಹುದು ಅಥವಾ ಕಟ್ಟಬಹುದು.
.
ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಮೇಷ
ಧಾರ್ಮಿಕ ಕಾರ್ಯಕ್ರಮ ಶಂಕುಸ್ಥಾಪನೆಗೆ ಅವಕಾಶ. ಆರ್ಥಿಕವಾಗಿ ಸಮಸ್ಯೆಗಳ ತಂತ್ರಗಳ ಜೋಡಣೆ, ರೂಪಣೆ, ಸಫ‌ಲತೆಯನ್ನು ತಂದುಕೊಡಲಿದೆ. ವಾಹನ ಮಾಲೀಕರಿಗೆ ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ಅಧಿಕವಾಗುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ಸ್ಥಳಕ್ಕೆ ಕೆಲಸದ ನಿಯೋಜನೆ. ಹೂಡಿಕೆಗಳಲ್ಲಿ ಕೊಂಚ ಚೇತರಿಕೆ. ಸಾಂಸಾರಿಕವಾಗಿ ಸಣ್ಣಪುಟ್ಟ ಸಮಸ್ಯೆಗಳಿಂದ ದೊಡ್ಡ ಸಮಸ್ಯೆ ಉದ್ಭವ. ಸಹೋದರ ಜೊತೆ ಹೊಂದಾಣಿಕೆ ಮುಖ್ಯ. ಪ್ರೇಮಿಗಳಿಗೆ ವಿಶ್ವಾಸ ಮರುಸೃಷ್ಟಿ.
ಶುಭವಾರ: ಗುರು, ಶನಿವಾರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ವೃಷಭ
ಕುಟುಂಬದಲ್ಲಿ ಶುಭಕಾರ್ಯಕ್ಕೆ ಸಂಬಂಧಪಟ್ಟ ವಿವಾಹ ಕಾರ್ಯ ಸಂತಸ ತರಲಿದೆ. ಬಂಧು ಕುಟುಂಬಿಕರ ಒಂದೇ ಕಡೆ ಸೇರುವ ಅವಕಾಶ. ಇಚ್ಛಿತ ಕೆಲಸ ಕಾರ್ಯಗಳು ಸರಳ ರೀತಿಯಲ್ಲಿ ನಡೆಯಲಿವೆ. ವಾಣಿಜ್ಯ, ವಿತ್ತಖಾತೆಗೆ ಸಂಬಂಧಪಟ್ಟ ಕಾರ್ಯ ಗಳಲ್ಲಿ ಪ್ರಗತಿ ತೋರಿಬರುತ್ತದೆ. ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಇಚ್ಛಿತ ಬದಲಾವಣೆ ಸಂಭವನೀಯ. ಕೀಳರಿಮೆ, ದೌರ್ಬಲ್ಯಗಳಿಂದ ಮನಸ್ತಾಪ. ವಾಹನ, ಭೂಖರೀದಿ, ಮನೆನಿರ್ಮಾಣ ಕಾರ್ಯ ಪತ್ನಿಯ ಮಾರ್ಗದರ್ಶನ ಹಾಗೂ ಸಹಾಯದಿಂದ ಯಶಸ್ಸು. ಶುಭಮಂಗಲ ಜರುಗುವುದು. ಪ್ರೇಮಿಗಳ ಮದುವೆ ಪ್ರಸ್ತಾಪ ಹಿರಿಯರ ಹತ್ತಿರ ಬೇಡಿಕೆ
ಶುಭವಾರ: ಮಂಗಳ, ಶನಿ,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮಿಥುನ
ತುರ್ತು ಕೆಲಸದ ನಿಮಿತ್ತ ಮನೆಯಿಂದ ದೂರ ಇರುವ ಸಾಧ್ಯತೆ. ವೃತ್ತಿರಂಗದಲ್ಲಿ ಎಷ್ಟೇ ತೊಂದರೆ ಇದ್ದರೂ ಮುಂದುವರೆಸುವ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಹಿರಿಯ ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕವಾಗಿ ತೊಂದರೆ ಕಾಡಲಿದೆ. ಸಮಾಧಾನದಿಂದ ಮುಂದು ವರಿಯಿರಿ. ಧನಾರ್ಜನೆಯಲ್ಲಿ ಪ್ರಗತಿ. ಖರ್ಚುವೆಚ್ಚಗಳು ಅಧಿಕ. ಮನೆ ಕಟ್ಟುವ ವಿಳಂಬ. ಶಿಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ನಿವೇಶನ ಖರೀದಿ ಸುವ ಭಾಗ್ಯ.
ಶುಭವಾರ: ಗುರು, ಶುಕ್ರ,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕಟಕ
ಹಣಕಾಸಿನ ಒತ್ತಡದಿಂದ ಮಾನಸಿಕ ಅಶಾಂತಿಗೆ ಕಾರಣವಾದೀತು. ಸ್ನೇಹಿತರಲ್ಲಿ ಕಲಹ. ಬಂಧು ಬಳಗದ ಜೊತೆ ಮನಸ್ತಾಪದ ಪ್ರಸಂಗ ತೋರಿ ಬಂದೀತು. ಆರೋಗ್ಯ ಎದೆನೋವಿನಿಂದ ನಿವಾರಣೆ. ಹಣಕಾಸಿನ ವಿಚಾರಣೆಯಲ್ಲಿ ವಿವಾದಗಳು ಕಂಡು ಬರಲಿದೆ. ಹೊಂದಾಣಿಕೆಯ ಪ್ರಯತ್ನ ಮಾಡಿರಿ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹವು ಲಭಿಸಲಿದೆ. ನಿರುದ್ಯೋಗಿಗಳು ತಮ್ಮ ಉದಾಸೀನತೆಯನ್ನು ಬಿಟ್ಟು ಪ್ರಯತ್ನಬಲ ಮುಂದುವರಿಸಬೇಕು. ಪ್ರೇಮಿಗಳು ದುಡುಕಿನ ನಿರ್ಧಾರ ಪಶ್ಚಾತಾಪ.
ಶುಭವಾರ: ಬುಧ, ಶುಕ್ರ,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಸಿಂಹರಾಶಿ
ಮಕ್ಕಳ ಶುಭಕಾರ್ಯಗಳ ಚಿಂತನೆ. ನಿಮ್ಮ ಮಕ್ಕಳ ಭವಿಷ್ಯದ ವಿಚಾರಧಾರೆ ಕಾರ್ಯರೂಪಕ್ಕೆ ಬರಲಿದೆ. ಧನಾರ್ಜನೆಯಲ್ಲಿ ಕೊಂಚ ನೆಮ್ಮದಿ.ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ನ್ಯಾಯಾಲಯ ಮೆಟ್ಟಿಲು ಹತ್ತುವ ಪ್ರಸಂಗ. ಧಾರ್ಮಿಕ ಗುರುಗಳ ಭೇಟಿ. ಮಾನಸಿಕವಾಗಿ ನೆಮ್ಮದಿ ತಂದೀತು. ದೈವಾನುಗ್ರಹವು ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ದುಂದುವೆಚ್ಚಾದಿಗಳ ಬಗ್ಗೆ ಕಡಿವಾಣ ಹಾಕಿರಿ. ನಿಮ್ಮ ಮಕ್ಕಳಿಗೆ ಸಹವಾಸದೋಷದಿಂದ ಅನಗತ್ಯವಾದ ಅಪವಾದವು ಕಾಡಲಿದೆ. ಹಳೆಯ ಸಂಗಾತಿ ಆಕಸ್ಮಿಕ ಬೇಟಿ.
ಶುಭವಾರ: ಸೋಮ, ಗುರು,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕನ್ಯಾ
ಆರ್ಥಿಕ ವಿಚಾರದಲ್ಲಿ ಆಶಾದಾಯಕ ಮೂಡಲಿದೆ. ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ. ಕುಟುಂಬದ ವಾತಾವರಣವು ಅಸಮಾಧಾನಕ್ಕೆ ಕಾರಣವಾದೀತು. ಕೌಟುಂಬಿಕ ವಾದ-ವಿವಾದ, ಕಲಹಗಳು ಉಪಶಮನವಾಗಲಿವೆ. ಹಿತ ಶತ್ರುಗಳಿಂದ ವಿರೋಧಿಗಳಿಗೆ ಆಮಿಷ. ರಾಜಕೀಯ ವರ್ಗದವರಿಗೆ ನಿಮ್ಮ ಅನುಯಾಯಿಗಳಿಂದ ಆತಂಕ ತಂದೀತು. ಮಕ್ಕಳ ಆರೋಗ್ಯ, ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಇನ್ನೊಬ್ಬರ ಬಗ್ಗೆ ನಿಂದನೆ ಮಾಡಿ ಸಮಸ್ಯೆ ಮಾಡಿಕೊಳ್ಳುವಿರಿ. ವಿವಾಹ ಸಮಸ್ಯೆ ಮುಂದುವರೆಯಲಿದೆ. ದಂಪತಿಗಳಿಗೆ ಸಂತಾನದ ಸಮಸ್ಯೆ ಕಾಡಲಿದೆ. ವೈದ್ಯಕೀಯ ಸಲಹೆ ಪ್ರಯೋಜನವಾಗಲಿಲ್ಲ.
ಶುಭವಾರ: ಬುಧ, ಗುರು,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ತುಲಾ
ಮಂದಗತಿಯಲ್ಲಿ ಸಾಗಲಿರುವ ಕೆಲಸ ಕಾರ್ಯ ಕಿರಿಕಿರಿಯೆನಿಸಿದರೂ ಸಮಾಧಾನ ತರಲಿದೆ. ಸ್ಥಗಿತ ಗೊಂಡ ಮದುವೆ ಮಾತುಕತೆ ಸಫ‌ಲವಾಗಲಿದೆ. ಕುಟುಂಬದಲ್ಲಿ ಪತ್ನಿಯ ಜೊತೆ ತುಸು ನೆಮ್ಮದಿ. ನಿಮ್ಮ ಪ್ರಾಮಾಣಿಕ ಪ್ರಯತ್ನ ಶ್ರೇಯಸ್ಸು ಉಂಟಾಗುವುದು. ತುರ್ತು ಕೆಲಸದ ನಿಮಿತ್ಯ ಮನೆಯಿಂದ ದೂರವಿರಿ. ನೀವು ಮಾಡುವಂತ ಕೆಲಸದಲ್ಲಿ ಮನೋದೃಢತೆ, ದಿಟ್ಟತನದ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ. ಗುರಿಯತ್ತ ನಡೆಯಲು ದೃಢ ಮನಸ್ಸು ಮಾಡಿರಿ. ಉದ್ಯೋಗದಲ್ಲಿ ಬಡ್ತಿ ಸ್ಥಾನಪಲ್ಲಟದ ಭರವಸೆ. ಮೇಲಾಧಿಕಾರಿಗಳು ನಿಮ್ಮನ್ನು ಸಹಕರಿಸುವರು. ರಸದೌತಣ ಸೇವಿಸಲಿದ್ದೀರಿ. ಸಂಗಾತಿಯೊಡನೆ ಸರಸ ಸಲ್ಲಾಪ, ಮದುವೆಗೆ ವಿರೋಧ.
ಶುಭವಾರ: ಗುರು, ಶುಕ್ರ,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ವೃಶ್ಚಿಕ
ಧನಾರ್ಜನೆಯ ಅವಕಾಶಗಳು ಹೇರಳವಾಗಿ ಬರಲಿದೆ. ನಿಮ್ಮ ನೇತೃತ್ವದಲ್ಲಿ ಪೂರ್ವನಿಯೋಜಿತ ಕೆಲಸಕಾರ್ಯಗಳ ಮುನ್ನಡೆಗಾಗಿ ನಡೆಸುವ ಪ್ರಯತ್ನಗಳು ಫ‌ಲ ನೀಡಲಿವೆ. ಬಂಧುಮಿತ್ರರ ಸಹಕಾರ ಸಿಗಲಿದೆ . ಬಹುಮುಖ್ಯ ಕಾರ್ಯಗಳಿಗೆ ಅನುಕೂಲ. ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಭಾಗವಹಿಸುವ ಅವಕಾಶ. ಕೊಂಚ ಕಲಹ ಪ್ರಸಂಗ ಎದುರಿಸುವ ಸಂಭವ. ವೃತ್ತಿರಂಗದಲ್ಲಿ ಕಳಂಕ ರಹಿತವಾಗಿ ನಿವೃತ್ತಿ ಹೊಂದ ಲ್ಲಿದ್ದಿರಿ.ಕೆಲಸ ಕಾರ್ಯಗಳು ಸರಾಗವಾಗಿ ನಡೆದುಹೋಗಲಿವೆ. ಗೃಹಕೃತ್ಯದಲ್ಲಿ ಅಡಚಣೆಗಳು ಕಾಡಲಿವೆ. ಸರಕಾರಿ ನೌಕರಿಗಾಗಿ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ. ಪ್ರೇಮಿಗಳ ಮದುವೆ ಹಿರಿಯರ ವಿರೋಧ.
ಶುಭವಾರ: ಗುರು, ಶನಿ,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಧನು
ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಲ್ಲಿ ಗುರಿ ಮುಟ್ಟುವಿರಿ. ಮೇಲಧಿಕಾರಿಯಿಂದ ಉತ್ತಮ ಪ್ರಶಂಸೆ. ತಮಗೆ ಯಾರ ಸಹಕಾರ ಇಲ್ಲದ ಕಾರಣ ವಿರೋಧಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡಲ್ಲಿ ಉತ್ತಮ. ಸಾಲ ಮರುಪಾವತಿಯ ಬಗ್ಗೆ ಒತ್ತಡ. ಗಂಡ ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ. ವ್ಯಾಪಾರ, ವ್ಯವಹಾರ ಪ್ರಾರಂಭ ಬೇಡ. ಭೂ, ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ. ಕಠಿಣ ಪರಿಶ್ರಮ ಹಾಗೂ ಸತತ ಶ್ರಮದಿಂದ ಉನ್ನತ ಪರೀಕ್ಷೆಯಲ್ಲಿ ಉತ್ತೀರ್ಣ. ಪ್ರೇಮಿಗಳ ಮದುವೆ ಜಾತಿ ಇಂದ ಅಡತಡೆ. ಪತ್ನಿಗೆ ಪದೇ ಪದೇ ಗರ್ಭ ನಷ್ಟ ಸಂಭವ.
ಶುಭವಾರ: ಗುರು, ಶುಕ್ರವಾರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮಕರ
ಅಪರೂಪದ ಸುವರ್ಣಾವಕಾಶ ಒಳ್ಳೆಯ ಸೂಚನೆ ತಂದುಕೊಡಲಿದೆ. ನಿಮ್ಮ ಪೂರ್ವನಿಯೋಜಿತ ಯೋಚನೆಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರಾಗಲಿದ್ದೀರಿ. ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಯೋಗವು ಒದಗಿಬರಲಿದೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿಮ್ಮ ಕಾರ್ಯ ಸಾಧನೆ ಗುರುತಿಸಲ್ಪಡುವ ಪ್ರಸಂಗ. ಧಾರ್ಮಿಕ ಕಾರ್ಯಗಳಿಂದ ಮಾನಸಿಕ ಶಾಂತಿ, ಸಮಾಧಾನ. ಶ್ರೀಗುರುವನ್ನು ಆರಾಧಿಸುವುದು ಮುಖ್ಯವಾಗಿದೆ. ಮದುವೆಯಾದ ಪ್ರೇಮಿಗಳಿಗೆ ಮನಸ್ತಾಪ.
ಶುಭವಾರ: ಗುರು, ಶುಕ್ರವಾರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಕುಂಭ
ಸಹೋದ್ಯೋಗಿಗಳಿಂದ ಹೊಂದಾಣಿಕೆ ಅಗತ್ಯವೆನಿಸಲಿದೆ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಒದಗಿಬರಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಸಮಾಧಾನ ತರಲಿದೆ. ನಿರೀಕ್ಷೆಯಲ್ಲಿದ್ದ ಅವಕಾಶ ಕೈ ತಪ್ಪುವ ಸಾಧ್ಯತೆ. ಮದ್ಯಸ್ತಿಕೆ ಜನರ ಬಗ್ಗೆ ಜಾಗೃತಿ ವಹಿಸಿ. ಧನಾರ್ಜನೆಯಲ್ಲಿ ವಿವಿಧ ರೀತಿಯ ಮಾರ್ಗ ಸಫ‌ಲತೆ ತಂದೀತು. ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಮಾತಾಪಿತೃ ಆರೋಗ್ಯದಲ್ಲಿ ಶಸ್ತ್ರಚಿಕಿತ್ಸೆ ಸಂಭವ.ಪತ್ನಿಗೆ ಉದರ ದೋಷ ಕಾಣಲಿದೆ. ಮಕ್ಕಳ ನಡುವಳಿಕೆಯಿಂದ ಬೇಸರ. ಕುಲದೇವತಾ ಸಂದರ್ಶನ ಭಾಗ್ಯ ಒದಗಿಬರಲಿದೆ.
ಶುಭವಾರ: ಶಕ್ರು, ಶನಿ,
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಮೀನ
ಶುಭಮಂಗಲ ಕಾರ್ಯಗಳಿಗಾಗಿ ಆತ್ಮೀಯರಿಂದ ಭರವಸೆ. ವೃತ್ತಿರಂಗದಲ್ಲಿ ವಿರೋಧ. ಮದ್ಯಸ್ತಿಕೆ ಚಾಡಿ ಮಾತಿನಿಂದ ಅವಮಾನ. ಆರ್ಥಿಕ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರಿಗಳಿಗೆ ಹೆಚ್ಚಿನ ಆದಾಯವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ. ಒಣ ಪ್ರತಿಷ್ಠೆತೆ ನಿಮಗೆ ಸಮಸ್ಯೆ ಕಾಡಲಿದೆ. ನಿಮ್ಮ ಮನಸ್ಸಿನ ನೋವನ್ನು ಹಂಚಿಕೊಳ್ಳಿರಿ. ಸಾಲಗಾರರಿಂದ ತುಂಬಾ ಕಿರಿಕಿರಿ. ಮದುವೆ ಕಾರ್ಯ ವಿನಾಕಾರಣ ಮುಂದೂಡುವ ಸಂಭವ. ಹಳೆಯ ನಿವೇಶನ ವಾಸ್ತು ಪ್ರಕಾರ ಪರಿವರ್ತನೆ ಸಾಧ್ಯತೆ. ಜಮೀನು ಮಾರಾಟ ವಿಳಂಬ. ಮನೆ ಕಟ್ಟಡ ಅರ್ಧಕ್ಕೆ ನಿಲ್ಲುವುದು.
ಶುಭವಾರ: ಸೋಮ, ಶುಕ್ರ, ಶನಿವಾರ
ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ನಾಡಿಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಜ್ಯೋತಿಷ್ಯ

To Top